ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳ ಫಸ್ಟ್‌ ಲಿಸ್ಟ್‌ ಔಟ್‌ – ಮಥುರಾದಿಂದ ಹೇಮಾ ಮಾಲಿನಿ ಕಣಕ್ಕೆ

Public TV
1 Min Read

ಬಾಲಿವುಡ್ ನಟಿ ಹೇಮಾ ಮಾಲಿನಿ (Hema Malini) ಅವರು 2024ರ ಲೋಕಸಭೆ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ 2ನೇ ಬಾರಿ ಲೋಕಸಭೆ ಚುನಾವಣೆಗೆ (Loksabha Elections 2024) ನಿಲ್ಲುವ ಮೂಲಕ ನಟಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಜಪಾನ್‌ಗೆ ಹೋಗಿದ್ದು ಪುಷ್ಪ 2ಗಾಗಿ ಅಲ್ಲ- ಮತ್ಯಾಕೆ?

1999ರಲ್ಲಿ ವಿನೋದ್ ಖನ್ನಾ ಪರವಾಗಿ ಹೇಮಾ ಮಾಲಿನಿ ಪ್ರಚಾರ ಮಾಡಿದ್ದರು. 2004ರಲ್ಲಿ ಅಫಿಷಿಯಲ್ ಆಗಿ ಬಿಜೆಪಿಗೆ ಸೇರ್ಪಡೆಯಾದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಜಯಂತ್ ಚೌಧರಿ ಅವರನ್ನು ಸೋಲಿಸಿ ಹೇಮಾ ಮಾಲಿನಿ ಮಥುರಾದಲ್ಲಿ ಗೆದ್ದು ಬೀಗಿದ್ದರು. ಇದೀಗ 2ನೇ ಬಾರಿಯು ಮಥುರಾದಿಂದಲೇ ನಟಿ ಲೋಕಸಭಾ ಎಲೆಕ್ಷನ್‌ಗೆ ನಿಂತಿದ್ದಾರೆ. ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು, ಮಥುರಾ ಅಭ್ಯರ್ಥಿಯಾಗಿ ಹೇಮಾ ಮಾಲಿನಿ ಹೆಸರನ್ನು ಘೋಷಿಸಿದೆ.

ಲೋಕಸಭಾ ಚುನಾವಣೆ 2024ಕ್ಕೆ ಬಿಜೆಪಿ ಸಜ್ಜಾಗಿದ್ದು, ಈ ಬಾರಿ ಹೇಮಾ ಮಾಲಿನಿ ಕೂಡ ಸಾಥ್ ನೀಡುತ್ತಿದ್ದಾರೆ. ನಿರೀಕ್ಷೆಯಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 16 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಂದ 195 ಸೀಟುಗಳಿಗೆ ಹೆಸರು ಪ್ರಕಟಿಸಿದೆ. ಪ್ರಧಾನಿ ಮೋದಿ ಸೇರಿದಂತೆ 34 ಸಚಿವರು ಕಣದಲ್ಲಿದ್ದಾರೆ.

Share This Article