ಕಲಬುರಗಿ: ಬಿಜೆಪಿಯವ್ರೇ ನಿಮ್ಮ ಮಕ್ಕಳನ್ನು ವಿದೇಶದಿಂದ ವಾಪಸ್ ಕರೆಸಿ, ಅವರನ್ನು ಮುಂದೆ ಬಿಟ್ಟು ಹೋರಾಟ ಮಾಡಿ. ಅಮಾಯಕರನ್ನ ಮುಂದೆ ಇಟ್ಟುಕೊಂಡು ಹೋರಾಟ ಮಾಡೋದು ಬಿಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್ ಕೊಟ್ಟಿದ್ದಾರೆ.
ಕಲಬುರಗಿಯಲ್ಲಿ (Kalaburgai) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ಬಡವರ ಮಕ್ಕಳನ್ನ ಮುಂದಿಟ್ಟುಕೊಂಡು ಹೋರಾಟ ಮಾಡೋದು ಎಷ್ಟು ಸರಿ? ನಿಮ್ಮ ಮಕ್ಕಳನ್ನು ಬೀದಿಗೆ ಇಳಿಸಿ ಹೋರಾಟ ಮಾಡಿಸಿ. ಆಮೇಲೆ ಮಾತಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪ್ರತಾಪ್ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಪ್ರದೀಪ್ ಈಶ್ವರ್
ಬಿಜೆಪಿಯವರಿಗೆ (BJP) ಬೇರೆ ಕೆಲಸ ಇಲ್ಲ. ಕೇಂದ್ರ ಸರ್ಕಾರದಿಂದ ಆಗ್ತಿರುವ ಅನ್ಯಾಯದ ಬಗ್ಗೆ ಅವರು ಮಾತಾಡಲ್ಲ. ಅಸ್ತಿತ್ವ, ಕುರ್ಚಿ ಉಳಿಸಿಕೊಳ್ಳಲು, ಆರ್‌ಎಸ್‌ಎಸ್ ಮನವೊಲಿಸಲು ಈ ರೀತಿ ಮಾತಾಡ್ತಾರೆ. ಮದ್ದೂರ ಶಾಂತಿ ಸಭೆ ಕರೆದಾಗ ಬಿಜೆಪಿಯವರು ಬಂದಿಲ್ಲ. ಸ್ವಲ್ಪನಾದ್ರೂ ಇವರಿಗೆಲ್ಲ ನಾಚಿಕೆ ಇದ್ಯಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮದ್ದೂರು ಗಲಾಟೆ ಕೇಸ್‌ನಲ್ಲಿ ಬಿಜೆಪಿ ಬೆಂಕಿ ಹಚ್ಚೋ ಕೆಲಸ ಮಾಡ್ತಿದೆ: ಎ.ಎಸ್ ಪೊನ್ನಣ್ಣ
ಕಳೆದ ಬಾರಿ ಮಂಡ್ಯ ಚಲೋ (Mandya Chalo) ಮಾಡಿದ್ರು, ಈ ಬಾರಿ ಮದ್ದೂರು ಚಲೋ ಮಾಡಿದ್ರು. ಇದರಿಂದ ಏನಾಯಿತು? ಧರ್ಮಸ್ಥಳ ಚಲೋ ಕೂಡ ಮಾಡಿದ್ರು. ಸೌಜನ್ಯ ಮನೆಗೆ ಹೋಗಿದ್ದಾರೆ. ಇವರೆಲ್ಲ ಧರ್ಮಸ್ಥಳದ ಪರವಾಗಿ ಇದ್ದಾರಾ ಅಥವಾ ಸೌಜನ್ಯ ಪರವಾಗಿ ಇದ್ದಾರಾ ಸ್ಪಷ್ಟಪಡಿಸಲಿ ಎಂದಿದ್ದಾರೆ.
ಸರ್ಕಾರ ಮದ್ದೂರು ಶಾಂತಿ ಸಭೆ ಕರೆದಿತ್ತು. ಆದರೆ ಬಿಜೆಪಿಯರು ಯಾಕೆ ಬಂದಿಲ್ಲ? ನಿಮ್ಮ ಉದ್ದೇಶವಾದ್ರೂ ಏನು? ಬಿಜೆಪಿಯವರಿಂದ ನಾವು ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾಗಿಲ್ಲ. ಕುಕ್ಕರ್ ಬ್ಲಾಸ್ಟ್ ಕೇಸ್‌ನಲ್ಲಿ ಅರಗ ಜ್ಞಾನೇಂದ್ರ ಅವರ ಊರಲ್ಲಿ ತರಬೇತಿ ಪಡೆದಿದ್ದರು. ಇದನ್ನೆಲ್ಲ ಯಾರು ಮಾತನಾಡಲ್ಲ ಎಂದು ಗುಡುಗಿದ್ದಾರೆ.
ಸಂಗಮೇಶ್ ಅವರ ಹೇಳಿಕೆ 20 ವರ್ಷ ಹಿಂದೆ ಕೊಟ್ಟಿರೋದು ಅಂತಾ ಅವರೇ ಹೇಳಿದ್ದಾರೆ. ಕುಮಾರಸ್ವಾಮಿ, ದೇವೇಗೌಡರು ಏನು ಹೇಳಿಕೆ ನೀಡಿದ್ರು ಅಂತಾ ಬಿಜೆಪಿಯವರು ನೋಡಿಕೊಳ್ಳಲಿ. ನನಗೆ ಯಾವ ಧರ್ಮ ಬೇಕೋ ಆ ಧರ್ಮಕ್ಕೆ ಹೋಗೋಕೆ ಅವಕಾಶ ಇದೆ. ಬಿಜೆಪಿಯವರು ಚಿ.ನಾ ರಾಮು ಮತಾಂತರದ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ರು. ಅದನ್ನ ಪರಿಶೀಲನೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.