-ಭಾರತದಲ್ಲಿ ನುಡಿದಂತೆ ನಡೆದ ಸರ್ಕಾರ ಅಂದ್ರೆ ಸಿದ್ದರಾಮಯ್ಯ ಸರ್ಕಾರ
ಬೆಂಗಳೂರು: ಪ್ರಧಾನಿ ಮೋದಿ (PM Modi) ವರ್ಚಸ್ಸು ಕಡಿಮೆಯಾಗುತ್ತಿದೆ, ಅದಕ್ಕೆ ಬಿಜೆಪಿಯವರು ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ (HM Revanna) ಬಿಜೆಪಿ (BJP) ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಿಹಾರದಲ್ಲಿ (Bihar) ಎನ್‌ಡಿಯು (NDU) ಪಕ್ಷದಿಂದ ಫ್ರೀ ಕರೆಂಟ್ ಗ್ಯಾರಂಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಮತ್ತು ಕೇಂದ್ರದಲ್ಲಿ ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಆಗೆಲ್ಲಾ ಜನಪ್ರಿಯ ಮತ್ತು ಜನರಪರ ಕಾರ್ಯಕ್ರಮಗಳನ್ನ ಜಾರಿ ಮಾಡಿದೆ. ಇಂದಿರಾಗಾಂಧಿ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಸೇರಿ ಅನೇಕ ಕಾರ್ಯಕ್ರಮ ತರಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸಿಎಂಗಳು ಒಂದೊಂದು ಕೊಡುಗೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದರೂ ಆದರೆ ಇನ್ನೂ ಕೊಟ್ಟಿಲ್ಲ. ವೀರಪ್ಪ ಮೊಯ್ಲಿ, ಬಂಗಾರಪ್ಪ, ಅನೇಕ ಕಾರ್ಯಕ್ರಮ ಕೊಟ್ಟರು. ರಾಜ್ಯದಲ್ಲಿ ಬಿಜೆಪಿ ಅಧಿಕಾದಲ್ಲಿ ಬೆಲೆ ಏರಿಕೆ ಜಾಸ್ತಿ ಆಗಿತ್ತು. ಜನರು ಕಷ್ಟ ಅನುಭವಿಸುತ್ತಿದ್ದರು. ಇದಕ್ಕಾಗಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದರು. ಸಿದ್ದರಾಮಯ್ಯ ಅನ್ನದಾತ ಎಂದು ಹೆಸರು ಪಡೆದರು. ನಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಕೊಡುವ ಮಾತು ಕೊಟ್ಟಿದ್ದೆವು. ಅದರಂತೆ ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವು ಎಂದು ತಿಳಿಸಿದರು.ಇದನ್ನೂ ಓದಿ: ಪತಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕಾ
ಗ್ಯಾರಂಟಿ ಕೊಟ್ಟಾಗ ಮೋದಿ ಕರ್ನಾಟಕ ದಿವಾಳಿ ಆಗುತ್ತದೆ ಎಂದು ಹೇಳಿ ಟೀಕೆ ಮಾಡಿದ್ದರು. ಮೋದಿ ಮತ್ತು ಅವರ ಬಾಲಂಗೋಚಿಗಳು ವಿರೋಧ ಮಾಡಿದ್ದರು. ಬಿಜೆಪಿಯವರು ಬರೀ ಘೋಷಣೆ ಮಾಡಿದ್ದಾರೆ. ನಾವು ಗೃಹಲಕ್ಷ್ಮಿ ಯೋಜನೆ ತಂದಿದ್ದೇವೆ, ಇದರಿಂದ ಹೆಣ್ಣುಮಕ್ಕಳಿಗೆ ಸಹಕಾರ ಆಗಿದೆ. ಬಿಜೆಪಿ ಅವರು ಆಗುವುದಿಲ್ಲ ಎಂದರು. ಜೊತೆಗೆ ಅವರು ಒಂದೊಂದು ಚುನಾವಣೆಗೆ ಒಂದು ಗ್ಯಾರಂಟಿ ಕೊಟ್ಟಿದ್ದಾರೆ. ಅವರು ಹೇಳೋದು ಒಂದು, ಮಾಡೋದು ಒಂದು.ಬಿಜೆಪಿಗೆ ದೇಶ, ರಾಜ್ಯದ ಚಿಂತೆ ಇಲ್ಲ ಎಂದು ಕಿಡಿಕಾರಿದರು.
ಮೋದಿ ವರ್ಚಸ್ಸು ಕಡಿಮೆ ಆಗುತ್ತಿದೆ. ಬಿಜೆಪಿ ಸ್ಥಾನ ಕಡಿಮೆ ಆಗುತ್ತಿದೆ. ಅದಕ್ಕೆ ಗ್ಯಾರಂಟಿ ಕೊಡ್ತಿದ್ದಾರೆ. ಭಾರತದಲ್ಲಿ ನುಡಿದಂತೆ ನಡೆದಿದ್ದು, ಯಾರಾದ್ರು ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ. ಭ್ರಷ್ಟಾಚಾರ ಇಲ್ಲದೆ ಜನರಿಗೆ ಹಣ ಹಾಕ್ತಿದ್ದೇವೆ. ಬಿಜೆಪಿ ಕೊಟ್ಟಿದ್ದನ್ನ ಬೇಡ ಎನ್ನುವುದಿಲ್ಲ. ಮೊದಲು ಗುಜರಾತ್ ಮಾದರಿ ಎಂದು ಹೇಳ್ತಿದ್ದರು. ಈಗ ಕರ್ನಾಟಕ ಗ್ಯಾರಂಟಿ ಮಾದರಿಯಾಗಿದೆ ಎಂದು ತಿಳಿಸಿದರು.
ಈವರೆಗೂ ಯಾವುದೇ ಗ್ಯಾರಂಟಿ ನಿಂತಿಲ್ಲ. ಮುಂದೆಯೂ ನಿಲ್ಲೊಲ್ಲ. ಭಾರತ ಇಷ್ಟು ಬೆಳೆಯೋಕೆ ಮೋದಿ ಕಾರಣ ಅಲ್ಲ. ಮನಮೋಹನ್ ಸಿಂಗ್ ಕಾರಣ. ಬಿಜೆಪಿ ಕೊಟ್ಟಿದ್ದು ಹರಕು ಸೀರೆ, ಮುರುಕಲು ಸೈಕಲ್ ಅಷ್ಟೆ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡೋ ಬಗ್ಗೆ ಯಾವುದೇ ಚಿಂತನೆ ಇಲ್ಲ. ಕಾರ್ಯಕ್ರಮಗಳಲ್ಲಿ ಕೆಲವು ಬದಲಾವಣೆ ಆಗಬಹುದು. ಆದರೆ ಸದ್ಯಕ್ಕೆ ಪರಿಷ್ಕರಣೆ ಬಗ್ಗೆ ಚಿಂತನೆ ಇಲ್ಲ. ಎರಡೂವರೆ ವರ್ಷ ಯೋಜನೆ ಕೊಟ್ಟಿದ್ದೇವೆ. ಮುಂದೆಯೂ ಕೊಡ್ತೀವಿ. ಗ್ಯಾರಂಟಿಯಿಂದ ಬಡ ಕುಟುಂಬಗಳಿಗೆ ಅನುಕೂಲ ಆಗಿದೆ. 5 ವರ್ಷವೂ ಗ್ಯಾರಂಟಿ ಇರಲಿದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ – ದೇಹದ ಮೇಲೆ ಡೆತ್‌ನೋಟ್ ಬರೆದು ಮಹಿಳೆ ಆತ್ಮಹತ್ಯೆ