ದಲಿತರು, ಆದಿವಾಸಿ ಹಕ್ಕುಗಳ ಮೇಲೆ BJP, RSS ಆಕ್ರಮಣ – ರಾಹುಲ್ ಕಿಡಿ

Public TV
1 Min Read

ಮುಂಬೈ: ಆರ್‌ಎಸ್‌ಎಸ್ (RSS), ಬಿಜೆಪಿಯಿಂದ (BJP) ದಲಿತರು ಹಾಗೂ ಆದಿವಾಸಿಗಳ ಹಕ್ಕುಗಳ (Tribal Rights) ಮೇಲೆ ಆಕ್ರಮಣವಾಗುತ್ತಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್‌ಗಾಂಧಿ (Rahul Gandhi) ಕಿಡಿ ಕಾರಿದ್ದಾರೆ.

ಭಾರತ್ ಜೋಡೋ ಯಾತ್ರೆಯಲ್ಲಿರುವ (Bharat Jodo Yatra) ರಾಹುಲ್‌ಗಾಂಧಿ ಅವರಿಂದು ಮಹಾರಾಷ್ಟ್ರದ (Maharastra) ವಾಸಿಮ್ ಜಿಲ್ಲೆಯಲ್ಲಿ ನಡೆದ ಬುಡಕಟ್ಟು ಸ್ವಾತಂತ್ರ‍್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

ಬಿಜೆಪಿ ದಲಿತರು, ಆದಿವಾಸಿಗಳಿಗೂ ಹಕ್ಕುಗಳು ಸಿಗಬೇಕು ಅಂತಾ ಒಪ್ಪೊಕೊಳ್ಳೋದಿಲ್ಲ. ಹಾಗೆಯೇ ಸಂವಿಧಾನವನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ. ಪ್ರತಿದಿನ ಸಂವಿಧಾನದ (Constitution Of India) ಮೇಲೆ ದಾಳಿ ಮಾಡುತ್ತಲೇ ಇದೆ ಎಂದು ಕಿಡಿ ಕಾರಿದ್ದಾರೆ.

ಆದಿವಾಸಿಗಳು ಈ ದೇಶದ ಮೂಲ ನಿವಾಸಿಗಳು. ಅವರ ಹಕ್ಕುಗಳು ಎಲ್ಲರಿಗಿಂತ ಮೊದಲು ಬರುತ್ತವೆ. ಆದರೆ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾಮುಂಡಾ ಅವರ ಆದರ್ಶಗಳನ್ನು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಗಳಿಗೆ ತೂರಿ, 4 ದಿಕ್ಕಿನಿಂದಲೂ ಆಕ್ರಮಣ ಮಾಡುತ್ತಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯ – ಕಾಲನ್ನು ಕಳೆದುಕೊಂಡ ಫುಟ್‌ಬಾಲ್ ಆಟಗಾರ್ತಿ ಆಸ್ಪತ್ರೆಯಲ್ಲೇ ಸಾವು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೆಪ್ಟೆಂಬರ್ 7ರಂದು ತಮಿಳುನಾಡಿನ (Tamil Nadu) ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆ ಇದುವರೆಗೆ 6 ರಾಜ್ಯಗಳ 28 ಜಿಲ್ಲೆಗಳಲ್ಲಿ ಸಂಚರಿಸಿದೆ. ಇದು ಸುಮಾರು 150 ದಿನಗಳ ಅವಧಿಯಲ್ಲಿ 3,570 ಕಿಮೀ ದೂರವನ್ನು ವ್ಯಾಪಿಸಿ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಕೊನೆಗೊಳ್ಳುತ್ತದೆ.

ಇದೀಗ ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಇಲ್ಲಿನ 5 ಜಿಲ್ಲೆಗಳಲ್ಲಿ 382 ಕಿಮೀ ಭಾರತ್ ಜೋಡೋ ಯಾತ್ರೆ ನಡೆಸಿ, ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *