ʻಮಹಾʼ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು; 11ರ ಪೈಕಿ 9 ಸ್ಥಾನಗಳಲ್ಲಿ ಜಯ!

Public TV
2 Min Read

– I.N.D.I.A ಕೂಟಕ್ಕೆ ಮುಖಭಂಗ!

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್‌ ಚುನಾವಣೆ ಫಲಿತಾಂಶ (Legislative Council Poll Result) ಹೊರಬಿದ್ದಿದ್ದು, ಬಿಜೆಪಿ ನೇತೃತ್ವದ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿದೆ. ಬಿಜೆಪಿ-ಏಕನಾಥ್‌ ಶಿಂಧೆ (Eknath Shinde) ಬಣದ ಶಿವಸೇನೆ ಹಾಗೂ ಮಿತ್ರಪಕ್ಷಗಳು 11 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಗೆದ್ದುಕೊಂಡಿವೆ.

274 ಸದಸ್ಯರ ಬಲದ ವಿಧಾನಸಭೆಯಿಂದ ಅಭ್ಯರ್ಥಿಗಳು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಪರಿಷತ್‌ನ 11 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟಗೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ (BJP Shiv Sena Alliance) ಸ್ಪರ್ಧಿಸಿದ್ದ 9 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಇದನ್ನೂ  ಓದಿ: ಪ್ರತಿವರ್ಷ ಜೂನ್‌ 25ರಂದು ʻಸಂವಿಧಾನ ಹತ್ಯಾ ದಿವಸ್‌ʼ ಆಚರಣೆ – ಅಮಿತ್‌ ಶಾ ಘೋಷಣೆ

103 ಶಾಸಕರನ್ನು ಹೊಂದಿರುವ ಬಿಜೆಪಿಯ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇವರಲ್ಲಿ ಪಂಕಜಾ ಮುಂಡೆ ಪ್ರಮುಖರಾಗಿದ್ದಾರೆ. ಜೊತೆಗೆ ಶಿವಸೇನೆ ಶಿಂಧೆ ಬಣ ಹಾಗೂ ಎನ್‌ಸಿಪಿ ಅಜಿತ್‌ ಪವಾರ್‌ ನೇತೃತ್ವದ ತಲಾ ಒಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಳೆದ ಲೋಕಸಭಾ ಚುನಾವಣೆಯ ಹಿನ್ನಡೆಯನ್ನು ಮೆಟ್ಟಿನಿಂತಿದ್ದಾರೆ. ಆದ್ರೆ ಇಂಡಿಯಾ ಕೂಟದ ಕಾಂಗ್ರೆಸ್‌ ಒಂದು ಸ್ಥಾನ ಪಡೆದರೆ, ಯುಬಿಟಿ ಸಹ ಒಂದೇ ಒಂದು ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದೆ.

ಪರಿಷತ್‌ ಚುನಾವಣೆಗೆ ಮುನ್ನ ಕುದುರೆ ವ್ಯಾಪಾರ, ರೆಸಾರ್ಟ್‌ ರಾಜಕಾರಣದ ಭೀತಿ ಉಂಟಾಗಿತ್ತು. ಜೊತೆಗೆ ಪ್ರತಿಪಕ್ಷಗಳಿಂದ ಅಡ್ಡಮತದಾನದ ಭೀತಿಯೂ ಕಾಡಿತ್ತು. ಆದ್ರೆ ಕಾಂಗ್ರೆಸ್‌ನ 6 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಅಜಿತ್‌ ಪವಾರ್‌ ಬಣದ ಎನ್‌ಸಿಪಿಗೆ ಮತ ಚಲಾಯಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ  ಓದಿ: ಅದಿರು ಕೊರತೆ ಆಗದಿರಲಿ; NMDC ಅಧಿಕಾರಿಗಳಿಗೆ ಕೇಂದ್ರ ಸಚಿವ ಹೆಚ್‌ಡಿಕೆ ನಿರ್ದೇಶನ

Share This Article