ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕನ ಹೊಲ ನಾಶಗೊಳಿಸಿದ ಬಿಜೆಪಿಗರು!

Public TV
1 Min Read

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕ ರೈತರೊಬ್ಬರ ಹೊಲ ನಾಶ ಮಾಡಿರೋ ಆರೋಪವೊಂದು ಕೇಳಿ ಬಂದಿದೆ.

ಬಿಜೆಪಿಯವರು ಜಗದೀಶ್ ಕರಡಿ ಎಂಬ ರೈತರ ಹೊಲದ ಬದುಗಳನ್ನು ಒಡೆದು ಜಾಗ ಸಮ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ರೈತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದ ನಾಗೂರು ರಸ್ತೆ ಬಳಿಯ ಹೆಲಿಪ್ಯಾಡ್ ಬಳಿ ಸರ್ವೆ ನಂಬರ್ 111 ರ ಹೊಲವನ್ನು ಬಿಜೆಪಿಯವರು ನಾಶ ಮಾಡಿದ್ದಾರೆ.

ಹುನಗುಂದ ಶಾಸಕ ದೊಡ್ಡನಗೌಡ ಪಾಟಿಲ್, ಮಂಜು ಶೆಟ್ಟರ್, ಮಲ್ಲಯ್ಯ ಮೂಗನೂರಮಠ, ಸುಗೂರೇಶ್ ನಾಗಲೋಟಿ, ಶ್ಯಾಮಸುಂದರ ಎಂಬವರ ವಿರುದ್ಧ ರೈತ ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ಬಾಗಲಕೋಟೆಗೆ ಆಗಮಿಸಿದ್ದು, ಬಸವಣ್ಣನವರ ಐಕ್ಯ ಮಂಟಪಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಶಾ ಅವರಿಗೆ ಶಾಸಕ ಲಕ್ಷ್ಮಣ ಸವದಿ ಹಾಗೂ ಹುನಗುಂದ ಮುಖಂಡರು ಸಾಥ್ ನಿಡಿದ್ರು. ನಂತರ ಆರ್. ವೀರಮಣಿ ಕ್ರೀಡಾಂಗಣಕ್ಕೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಉರಿಬಿಸಿಲಿನಲ್ಲಿಯೇ ಅಭ್ಯರ್ಥಿ ದೊಡ್ಡಣಗೌಡ ಜಿ ಪಾಟೀಲ್ ಪರ ಪ್ರಚಾರ ಕಾರ್ಯದಲ್ಲಿ ತೊಡಿಗಿದ್ರು.

Share This Article
Leave a Comment

Leave a Reply

Your email address will not be published. Required fields are marked *