ಪಾಕ್ `ಬಿಸ್ಕತ್ ಟ್ರೋಫಿ’ ಕಂಡು ಟ್ರೋಲ್ ಮಾಡಿದ ಐಸಿಸಿ!

Public TV
1 Min Read

ದುಬೈ: ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವೆ ನಡೆಯಲಿರುವ ಮೂರು ಪಂದ್ಯಗಳ ಟಿ20 ಟೂರ್ನಿಗೆ ಪಿಸಿಬಿ ಟ್ರೋಫಿಯನ್ನು ಅನಾವರಣ ಮಾಡಿದ್ದು, ಟ್ರೋಫಿಯನ್ನು ಕಂಡ ಐಸಿಸಿ ತನ್ನ ಟ್ವಿಟ್ಟರ್‍ನಲ್ಲಿ ಪಾಕ್ ಕ್ರಿಕೆಟ್ ಮಂಡಳಿಯನ್ನು ಟ್ರೋಲ್ ಮಾಡಿದೆ.

ಆಸೀಸ್ ಹಾಗೂ ಪಾಕ್ ನಡುವಿನ ಟಿಯುಸಿ ಕ್ರಿಕೆಟ್ ಕಪ್ ಟೂರ್ನಿ ಟ್ರೋಫಿಯನ್ನು ಇತ್ತಂಡಗಳ ನಾಯಕರು ಅನಾವರಣ ಮಾಡಿದ್ದು, ಇದರ ಬೆನ್ನಲ್ಲೇ ಟ್ರೋಫಿಯ ಫೋಟೋವನ್ನು ತನ್ನ ಖಾತೆಯಲ್ಲಿ ಟ್ವೀಟ್ ಮಾಡಿರುವ ಐಸಿಸಿ, ಬಿಸ್ಕತ್ ತೆಗೆದುಕೊಳ್ಳುವುದು, ಪಡೆಯುವುದು ಇದರ ಹೊಸ ಆರ್ಥ ಎಂದು ಬರೆದುಕೊಂಡಿದೆ.

ಅಂದಹಾಗೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪ್ರಯೋಜನೆ ಮಾಡುತ್ತಿರುವ ಬಿಸ್ಕತ್ ಸಂಸ್ಥೆಯ ಪ್ರಚಾರಕ್ಕಾಗಿ ಟೂರ್ನಿ ಟ್ರೋಫಿಯನ್ನ ಅದೇ ಮಾದರಿಯಲ್ಲಿ ಸಿದ್ಧಪಡಿಸಿದೆ. ಸ್ಟಂಪ್ಸ್, ಬಾಲ್ ಒಳಗೊಂಡಿರುವ ಟ್ರೋಫಿಯ ಮೇಲ್ಭಾಗದಲ್ಲಿ ಬಿಸ್ಕತ್ ಮಾದರಿ ನಿರ್ಮಿಸಲಾಗಿದೆ.

ಟಿಯುಸಿ ಟ್ರೋಫಿ ಅನಾವರಣಗೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ಟಿಗರು ಪಿಸಿಬಿಯನ್ನು ಟ್ರೋಲ್ ಮಾಡಿದ್ದು, ಐಸಿಸಿ ಕೂಡ ಚಾಂಪಿಯನ್ಸ್ ಟ್ರೋಫಿ ಫೋಟೋ ಟ್ವೀಟ್ ಮಾಡಿ ಟ್ರೋಲ್ ಮಾಡಿದೆ. ಐಸಿಸಿ ಟ್ವೀಟ್ ಮಾಡುತ್ತಿದಂತೆ ಹಲವು ಮಂದಿ ಮರು ಟ್ವೀಟ್ ಮಾಡಿ ತಮ್ಮದೇ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪಾಕಿಸ್ತಾನ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿದರೆ, ಅವರು ಮುಂದಿನ ರೋಟಿ ಕಪ್ ಗೆಲ್ಲುತ್ತಾರೆ ಎಂದು ಪ್ರತಿಭಾ ಎಂಬವರು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

ಟಿ20 ಸರಣಿಗೂ ಮುನ್ನ ನಡೆದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ 1-0 ಅಂತರದಲ್ಲಿ ಜಯಗಳಿಸಿದ್ದು, ಆಸೀಸ್ ಟಿ20 ಸರಣಿಯಲ್ಲಿ ಕಮ್‍ಬ್ಯಾಕ್ ಮಾಡುವ ಮೂಲಕ ತಿರುಗೇಟು ನೀಡುವ ವಿಶ್ವಾಸದಲ್ಲಿದೆ. ಮೊದಲ ಟಿ20 ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *