ಕರ್ನಾಟಕದ ಹೊಸ ಕ್ರಶ್ ನಿಮಿಕಾಗೆ ಹುಟ್ಟುಹಬ್ಬದ ಸಂಭ್ರಮ: ಉಪ್ಪಿಗೆ ಜೋಡಿಯಾದ ಪುಷ್ಪವತಿ

Public TV
3 Min Read

ಶೇಕ್ ಇಟ್ ಪುಷ್ಪವತಿ ಹಾಡಿನ ಮೂಲಕ ಭಾರೀ ಕ್ರೇಜ್ ಮೂಡಿಸಿದ್ದ ನಿಮಿಕಾ ರತ್ನಾಕರ್ (Nimika Ratnakar) ನೋಡ ನೋಡುತ್ತಲೇ ಕರ್ನಾಟಕದ ಹೊಸಾ ಕ್ರಶ್ ಅನ್ನಿಸಿಕೊಂಡಿದ್ದೊಂದು ಅಚ್ಚರಿ. ಈ ಹಾಡಿನ ಪ್ರಭೆಯಲ್ಲಿಯೇ ನಿಮಿಕಾ ಇದೀಗ ಕನ್ನಡ ಚಿತ್ರಂಗದ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಎಂಥವರೂ ಅಚ್ಚರಿಗೊಳ್ಳುವಂತಹ ಅವಕಾಶಗಳೂ ಕೂಡಾ ನಿಮಿಕಾರನ್ನು ಅರಸಿ ಬರುತ್ತಿವೆ. ಸದ್ಯಕ್ಕೆ ಓಂ ಪ್ರಕಾಶ್ ರಾವ್ ನಿರ್ದಶನದ `ತ್ರಿಶೂಲಂ’ (Trishulam) ಚಿತ್ರದಲ್ಲಿ ಉಪೇಂದ್ರ (Upendra) ಅವರಿಗೆ ಜೋಡಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಹೀಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಂಚಲನ ಸೃಷ್ಟಿಸಿರುವ ನಿಮಿಕಾಗಿಂದು ಹುಟ್ಟುಹಬ್ಬದ ಸಂಭ್ರಮ.

ಒಂದೇ ಒಂದು ಚೆಂದದ ಅವಕಾಶ ಒಮ್ಮೊಮ್ಮೆ ಬದುಕಿನ ದಿಕ್ಕನ್ನೇ ಬದಲಿಸಿ ಬಿಡುತ್ತದೆ. ಮಂಗಳೂರು ಹುಡುಗಿ ನಿಮಿಕಾ ಪಾಲಿಗೆ ಅಂಥಾದ್ದೊಂದು ಅದೃಷ್ಟದ ಬಿಂದುವಿನಂತಿರೋದು ಕ್ರಾಂತಿ ಚಿತ್ರ. ಅದರಲ್ಲಿ ಶೇಕ್ ಇಟ್ ಪುಷ್ಪವತಿ ಹಾಡಿಗೆ ಕುಣಿದಿದ್ದ ನಿಮಿಕಾ, ಏಕಾಏಕಿ ಕರ್ನಾಟಕದ ಕ್ರಶ್ ಅನ್ನಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾಗಳಲ್ಲಂತೂ ಫ್ಯಾನ್ ಫಾಲೋವರ್ಸ್ ಸಂಖ್ಯೆ ಜ್ವರದಂತೆ ಏರಿಕೊಂಡಿತ್ತು. ಹಾಗೆ ಹುಟ್ಟಿಕೊಂಡ ಅಭಿಮಾನಿಗಳೆಲ್ಲ ನಿಮಿಕಾ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ತಂಡೋಪತಂಡವಾಗಿ ಮನೆಯ ಬಳಿಯೇ ಬಂದು ನಿಮಿಕಾರನ್ನು ಹತ್ತಿರದಿಂದ ಕಂಡು ಖುಷಿಗೊಳ್ಳುತ್ತಿದ್ದಾರೆ. ಓರ್ವ ನಟಿಯಾಗಿ ನಿಮಿಕಾ ಪಾಲಿಗಿದು ನಿಜಕ್ಕೂ ಸಂತಸದ ಸಂಗತಿ.

ಈ ಹುಟ್ಟುಹಬ್ಬ (birthday) ನಿಮಿಕಾರ ಬದುಕಿ ಮಟ್ಟಿಗೆ ಟರ್ನಿಂಗ್ ಪಾಯಿಂಟ್ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಯಾಕೆಂದರೆ, ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಬಹುತೇಕ ನಟಿಯರ ಮಹಾ ಕನಸು. ಒಂದಷ್ಟು ಹೆಜ್ಜೆಗಳಲ್ಲಿಯೇ ಅಂಥದ್ದೊಂದು ಅವಕಾಶ ನಿಮಿಕಾ ರನ್ನು ಅರಸಿ ಬಂದಿದೆ. ಹಾಗೆ ಸಿಕ್ಕ ಅವಕಾಶವನ್ನು ಶಕ್ತಿ ಮೀರಿ ಬಳಸಿಕೊಂಡು, ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ ಖುಷಿ ನಿಮಿಕಾಗಿದೆ. ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸಾಧು ಕೋಕಿಲಾ ಮುಂತಾದ ಘಟಾನುಘಟಿಗಳ ಜೊತೆ ನಟಿಸೋ ಅವಕಾಶ, ಅವರ ಮಾರ್ಗದರ್ಶನದಲ್ಲಿ ತಿದ್ದಿಕೊಳ್ಳುವ ಸೌಭಾಗ್ಯಗಳೆಲ್ಲವೂ ನಿಮಿಕಾ ಪಾಲಿಗೆ ಲಭಿಸಿದೆ. ಇದನ್ನೂ ಓದಿ:ಕೆಟ್ಟ ಸಿನಿಮಾ ಬಗ್ಗೆ ಬಾಯ್ಬಿಟ್ಟ ತಮನ್ನಾ ನೇರ ಮಾತಿಗೆ ವಿಜಯ್ ಫ್ಯಾನ್ಸ್ ಕಿಡಿ

ಅದರಲ್ಲಿಯೂ ವಿಶೇಷವಾಗಿ ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡುತ್ತಾ, ಅವರನ್ನು ಆರಾಧಿಸುತ್ತಾ ಬೆಳೆದು ಬಂದಿರುವರು ನಿಮಿಕಾ ರತ್ನಾಕರ್. ಈ ಚಿತ್ರದಲ್ಲಿ ಸಾಕ್ಷಾತ್ ರವಿಮಾಮಾ ಜತೆಗೇ ನಟಿಸುವ ಅವಕಾಶ ಸಿಕ್ಕಿದ್ದರಿಂದಾಗಿ ಸಹಜವಾಗಿಯೇ ನಿಮಿಕಾ ಥ್ರಿಲ್ ಆಗಿದ್ದಾರೆ. ಓಂಪ್ರಕಾಶ್ ರಾವ್, ಉಪೇಂದ್ರ, ಸಾಧು ಕೋಕಿಲಾ ಥರದ ನಿರ್ದೇಶಕರಿಂದ ಟಿಪ್ಸ್ ತೆಗೆದುಕೊಂಡು ನಟಿಯಾಗಿ ಪಳಗುವ ಅವಕಾಶ ಸಿಕ್ಕಿದ್ದರ ಬಗ್ಗೆ ನಿಮಿಕಾರಲ್ಲೊಂದು ಧನ್ಯತಾ ಭಾವವಿದೆ. ಈ ಚಿತ್ರದಲ್ಲಿ ಬಬ್ಲಿ ಶೇಡಿನ ಪಾತ್ರದಲ್ಲಿ ನಿಮಿಕಾ ನಟಿಸಿದ್ದಾರಂತೆ. ಅದಕ್ಕೊಂದಷ್ಟು ಎಮೋಷನಲ್ ಛಾಯೆಯೂ ಇದೆಯಂತೆ. ಒಟ್ಟಾರೆಯಾಗಿ ತ್ರಿಶೂಲಂ ಚಿತ್ರ ನಿಮಿಕಾ ವೃತಿ ಬದುಕಿಗೆ ಮತ್ತೊಂದಷ್ಟು ಆವೇಗ ತಂದು ಕೊಡುವ ಲಕ್ಷಣಗಳು ದಟ್ಟವಾಗಿವೆ.

 

ಮಂಗಳೂರು ಮೂಲದಿಂದ ಬಂದು ಕನ್ನಡ ಮಾತ್ರವಲ್ಲದೇ ಬಾಲಿವುಡ್ ಮಟ್ಟದಲ್ಲಿ ಹೆಸರು ಮಾಡಿರುವ ಅನೇಕ ನಟಿಯರಿದ್ದಾರೆ. ನಿಮಿಕಾರ ವೇಗ ನೋಡಿದರೆ, ಆ ಸಾಲಿನಲಿ ಸೇರ್ಪಡೆಗೊಳ್ಳುವ ಲಕ್ಷಣಗಳು ದಟ್ಟವಾಗಿವೆ ಮೂಲತಃ ಇಂಜಿನಿಯರ್ ಆಗಿರುವ ನಿಮಿಕಾ, ಕಲೆಯ ಕರೆಗೆ ಓಗೊಟ್ಟು ನಟಿಯಾದವರು. ಗಾಯನದ ಬಗ್ಗೆಯೂ ಅತೀವ ಆಸಕ್ತಿ ಇಟ್ಟುಕೊಂಡಿರುವ ನಿಮಿಕಾ ತುಳು ಚಿತ್ರವೊಂದಕ್ಕೆ ಹಾಡೊಂದಕ್ಕೆ ಧ್ವನಿಯಾಗಿದ್ದರು. ರಾಮಧಾನ್ಯ ಚಿತ್ರದ ಮೂಲಕ ನಟಿಯಾದ ಅವರು ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ವಿನ್ನರ್ ಕೂಡಾ ಹೌದು. ಹೀಗೆ ಸಾಗಿ ಬಂದಿರುವ ನಿಮಿಕಾ ಈಗ ಪುಷ್ಪವತಿ ಸಾಂಗಿನ ಫೇಮಿನಲ್ಲಿ ಫೇಮಸ್ ಆಗಿದ್ದಾರೆ. ಈ ಕ್ಷಣಕ್ಕೂ ಕರ್ನಾಟಕ ಕ್ರಶ್ ಸ್ಥಾನ ಕಾಯ್ದುಕೊಂಡಿರುವ ನಿಮಿಕಾರ ವೃತ್ತಿ ಬದುಕು, ತ್ರಿಶೂಲಂ ಮೂಲಕ ಮತ್ತಷ್ಟು ಮಿಂಚುವ ಸಾಧ್ಯತೆಗಳಿವೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್