‘ಬಿಲ್‍ಗೇಟ್ಸ್’ನಲ್ಲಿದೆ ಯಮಲೋಕದ ಅರಮನೆಯ ವೈಭವ

Public TV
1 Min Read

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‍ವುಡ್ ನಲ್ಲಿ ಭಾರೀ ಕುತೂಹಲ ಹಾಗು ನಿರೀಕ್ಷೆ ಮೂಡಿಸುವ ಟೈಟಲ್‍ನ ಚಿತ್ರಗಳು ಬರ್ತಿವೆ. ಇಂತಹ ಚಿತ್ರಗಳಲ್ಲಿ ‘ಬಿಲ್‍ಗೇಟ್ಸ್’ ಸಹ ಒಂದು. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ಸ್ನೇಹಿತರೆಲ್ಲರು ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಂಡ್ಯ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕಾಮಿಡಿ ಸ್ಟಾರ್ ಚಿಕ್ಕಣ್ಣ ಹಾಗೂ ಶಿಶಿರ್ ಶಾಸ್ತ್ರಿ ಕಾಂಬಿನೇಷನ್‍ನ ನಾಯಕತ್ವದ ಈ ಚಿತ್ರಕ್ಕೆ ಹೆಸರಿಗೆ ತಕ್ಕಂತೆ ದೊಡ್ಡ-ಡೊಡ್ಡ ಅದ್ದೂರಿ ಸೆಟ್ ನಿರ್ಮಿಸಿ, ಕಲ್ಪನೆಯಂತೆ ಯಮಲೋಕದ ಅರಮನೆಯ ಅದ್ದೂರಿತನವನ್ನು ತೋರಿಸಲಾಗ್ತಿದೆ ಅಂತೆ. ಇನ್ನು ಈ ಕಲಾ ನಿರ್ದೇಶನದ ಜವಾಬ್ದಾರಿಯನ್ನು ಕೆಜಿಎಫ್ ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಸ್ಯಾಂಡಲ್‍ವುಡ್‍ನ ಪ್ರಖ್ಯಾತ ಕಲಾ ನಿರ್ದೇಶಕ ಶಿವಕುಮಾರ್ ಅವರು ಹೊತ್ತು ಇದರ ಜಲಕ್ ಟೀಸರ್ ನಲ್ಲೇ ಗೊತ್ತಾಗುತ್ತೆ.

‘ಬಿಲ್‍ಗೇಟ್ಸ್’ನಲ್ಲಿ ಕುರಿ ಪ್ರತಾಪ್, ರಾಜಶೇಖರ್, ರಶ್ಮಿತಾ, ವಿ ಮನೊಹರ್, ಅಕ್ಷರ ರೆಡ್ಡಿ, ಬ್ಯಾಂಕ್ ಜನಾರ್ದನ್, ಗಿರಿ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರವು ಅದ್ಭುತವಾಗಿ ಮೂಡಿ ಬಂದಿದ್ದು, ಫೆಬ್ರವರಿ 7ಕ್ಕೆ ಬಿಡುಗಡೆಯಾಗಲು ರೆಡಿಯಾಗಿದೆ. ಅಂತೂ ಇಂತೂ ಕಾಮಿಡಿ ಕೌಟುಂಬಿಕ ಸಿನಿಮಾವಾದ ‘ಬಿಲ್‍ಗೇಟ್ಸ್’ ಅನ್ನು ಎಲ್ಲಾ ವರ್ಗದವರು ಕುಳಿತು ನೋಡುವಂತಿದ್ದು, ಈ ಮನೋರಂಜನೆಯ ಊಟಕ್ಕೆ ನೀವು ಫೆಬ್ರವರಿ 7ರ ತನಕ ಕಾಯಲೇಬೇಕು.

Share This Article
Leave a Comment

Leave a Reply

Your email address will not be published. Required fields are marked *