ಕೋಲಾರ: ರೌಡಿಶೀಟರ್ ಬಿಕ್ಲು ಶಿವ ಮರ್ಡರ್ ಕೇಸ್‌ನಲ್ಲಿ (Biklu Shiva Murder Case) ಕೋಲಾರ (Kolar) ಮೂಲದ ನಾಲ್ವರು ಸುಪಾರಿ ಕಿಲ್ಲರ್‌ಗಳನ್ನು (Supari Killers) ಬಂಧಿಸಲಾಗಿದೆ.
ರೌಡಿ ಶೀಟರ್ ಬಿಕ್ಲು ಶಿವ ಕೊಲೆಯಲ್ಲಿ ಸುಪಾರಿ ಪಡೆದಿದ್ದ ನಟೋರಿಯಸ್‌ಗಳ ಪೈಕಿ ಕೋಲಾರ ಜಿಲ್ಲೆಯ ನಾಲ್ಕು ಜನರು ಮಾಲೂರು ತಾಲೂಕಿನವರಾಗಿದ್ದಾರೆ. ದಿನ್ನಹಳ್ಳಿ ಗ್ರಾಮದ ಅಭಿಷೇಕ್, ಪೆಮ್ಮದೊಡ್ಡಿ ಗ್ರಾಮದ ನರಸಿಂಹ, ಚಿಕ್ಕದಾನವಹಳ್ಳಿ ಗ್ರಾಮದ ಮುರುಗೇಶ್ ಹಾಗೂ ಬಂಗಾರಪೇಟೆ ತಾಲೂಕು ಮಾರಾಂಡಹಳ್ಳಿ ಗ್ರಾಮದ ಸುದರ್ಶನ್ ಬಂಧಿತ ಆರೋಪಿಗಳಾಗಿದ್ದಾರೆ. ಇದನ್ನೂ ಓದಿ: ಸೇರ್ಪಡೆಯಾಗಿ 2 ವರ್ಷದ ನಂತ್ರ ಯುನೆಸ್ಕೋದಿಂದ ಹೊರ ಬಂದ ಅಮೆರಿಕ
ಬಂಧಿತರ ಪೈಕಿ ಮುರುಗೇಶ್ ತಮಿಳುನಾಡಿನ ಬೇರಕಿ ಕಾರ್ತಿಕ್ ಎಂಬಾತನ ಮರ್ಡರ್ ಕೇಸ್‌ನಲ್ಲಿದ್ದಾನೆ. ಇನ್ನುಳಿದಂತೆ ಮೂರು ಜನರು ಸಹ ಕೂಲಿ, ವ್ಯವಸಾಯ ಮಾಡಿಕೊಂಡಿದ್ದ ಆರೋಪಿಗಳಾಗಿದ್ದಾರೆ. ಎಲ್ಲರೂ ಕಾಲೇಜು ಅರ್ಧಕ್ಕೆ ಬಿಟ್ಟು ಇತ್ತೀಚೆಗೆ ಗ್ಯಾಂಗ್ ಸೇರಿದ್ದರು ಎನ್ನಲಾಗಿದ್ದು, ಕಳೆದ ರಾತ್ರಿ ಎಸಿಪಿ ರಂಗಪ್ಪ ಅವರ ತಂಡದಿಂದ ನಾಲ್ವರನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ನ ಪ್ರಮುಖ ಆರೋಪಿ ಎಸ್ಕೇಪ್ – ಲುಕೌಟ್ ನೋಟಿಸ್‌ಗೆ ಸಿದ್ಧತೆ