– ಬೈರತಿ ಬಸವರಾಜ್‌ಗೆ ನೋಟಿಸ್
ಬೆಂಗಳೂರು: ರೌಡಿಶೀಟರ್ (Rowdysheetar) ಶಿವಪ್ರಕಾಶ್ @ಬಿಕ್ಲು ಶಿವ ಮರ್ಡರ್ ಪ್ರಕರಣದ ತನಿಖೆಯನ್ನ ಭಾರತಿ ನಗರ (Bharathi Nagar) ಪೊಲೀಸರು ಚುರುಕುಗೊಳಿಸಿದ್ದಾರೆ. ಪ್ರಕರಣ ಸಂಬಂದ ಐವರು ಆರೋಪಿಗಳು ಭಾರತಿ ನಗರ ಪೊಲೀಸ್ ಠಾಣೆಗೆ ಬಂದು ಸರೆಂಡರ್ ಆಗಿದ್ದಾರೆ.
ಕೊಲೆ ಮಾಡಿದ್ದಾಗಿ ಆರೋಪಿಗಳು ಸರೆಂಡರ್ ಆಗಿದ್ದಾರೆ. ಆರೋಪಿಗಳಾದ ಕಿರಣ್, ವಿಮಲ್ ಸೇರಿ ಐವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ವಶದಲ್ಲಿರುವ ಆರೋಪಿ ಕಿರಣ್ ಹಾಗೂ ಪ್ರಕರಣದ ಎ1 ಆರೋಪಿ ಜಗದೀಶ್@ ಜಗ್ಗ ಬಾವ ಬಾಮೈದರಾಗಿದ್ದಾರೆ. ಪೊಲೀಸರ ವಶದಲ್ಲಿರುವ ಕಿರಣ್ ವಿಚಾರಣೆಗೆ ಒಳಪಡಿಸಿ ಎ1 ಆರೋಪಿಯ ಬಗ್ಗೆ ಪೊಲೀಸರು ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಪೊಲೀಸರ ವಿಚಾರಣೆ ವೇಳೆ ನನಗೂ ಬಿಕ್ಲು ಶಿವ @ ಶಿವಪ್ರಕಾಶ್‌ಗೆ ವೈಶ್ಯಮ್ಯ ಇತ್ತು. ಕೊಲೆ ಮಾಡುವಾಗ ವಿಡಿಯೋದಲ್ಲಿರುವುದು ನಾನು ಮಾತ್ರ. ಪ್ರಕರಣದಲ್ಲಿ ನನ್ನ ಭಾವ ಪ್ರಕರಣದ ಎ1 ಆರೋಪಿ ಜಗ್ಗ @ ಜಗದೀಶನ ಪಾತ್ರ ಇಲ್ಲ. ನನ್ನ ಮತ್ತು ಬಿಕ್ಲು ಶಿವು ಮಧ್ಯೆ ಇದ್ದ ಮನಸ್ತಾಪ ಅಷ್ಟೇ. ಹಾಗಾಗಿ ನಾನೇ ಹತ್ಯೆ ಮಾಡಿದ್ದಿನಿ ಎಂದು ಆರೋಪಿ ಕಿರಣ್ ಹೇಳಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಸದ್ಯ ಕೊಲೆ ಮಾಡುವ ವೀಡಿಯೋದಲ್ಲಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಹಲವು ಮಾಹಿತಿಗಳನ್ನ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಬಾಗಲಕೋಟೆ ಯುವಕ ಅರೆಸ್ಟ್
ಇನ್ನು ಪ್ರಕರಣ ಸಂಬಂಧ ಮಾಜಿ ಸಚಿವ ಭೈರತಿ ಬಸವರಾಜುಗೆ ಪೊಲೀಸರು ನೋಟಿಸ್ ಕಳುಹಿಸಿದ್ದು, ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ನೋಟಿಸ್ ತಲುಪಿದ ಕೂಡಲೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಕ್ರೈಂ ನಂ 73/2025 ಸಂಬಂಧ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ವಿಚಾರಣೆ ಅವಶ್ಯಕತೆ ಹಿನ್ನೆಲೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಬುಲಾವ್ ನೀಡಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ: ಮಣ್ಣಗುಂಡಿ ಬಳಿ ಗುಡ್ಡಕುಸಿತ, ಬೆಂ-ಮಂ ರಾ.ಹೆದ್ದಾರಿ ಬಂದ್