ಜೆಸ್ಕಾಂ ನಿರ್ಲಕ್ಷ್ಯ- ಹೈಟೆನ್ಷನ್ ವೈಯರ್ ತಗುಲಿ ಬೈಕ್ ಸವಾರ ಸ್ಥಳದಲ್ಲೇ ಸಾವು

By
1 Min Read

ಯಾದಗಿರಿ: ಜೆಸ್ಕಾಂ (GESCOM) ನಿರ್ಲಕ್ಷ್ಯದಿಂದ ತುಂಡರಿಸಿ ಬಿದ್ದ ವಿದ್ಯುತ್ ಹೈಟೆನ್ಷನ್ ವೈಯರ್ ತಗುಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಯಾದಗಿರಿಯ (Yadagiri) ಮಾತಾಮಣಿಕೇಶ್ವರ ನಗರದಲ್ಲಿ ನಡೆದಿದೆ.

ವಡಗೇರಾ (Vadagera) ತಾಲೂಕಿನ ಬಬಲಾದ ಗ್ರಾಮದ ನಿವಾಸಿ ಕಾಜಾ ಪಟೇಲ್(23) ಮೃತ ಬೈಕ್ ಸವಾರ. ಕಾಜಾ ಪಟೇಲ್, ಯಾದಗಿರಿಯ ಸಹೋದರಿ ಮನೆಗೆ ತೆರಳಿ, ವಾಪಸ್ ಆಗುತ್ತಿದ್ದ ವೇಳೆ ತುಂಡರಿಸಿ ಬಿದ್ದಿದ್ದ ಹೈಟೆನ್ಷನ್ ವೈಯರ್ ನೋಡದೇ ಬೈಕ್‌ನಲ್ಲಿ ಹೋಗುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: Gadag | ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ

ಕಳೆದ ಮೂರು ದಿನದ ಹಿಂದೆ ಬಿರುಗಾಳಿ ಮಳೆಗೆ ಹೈಟೆನ್ಷನ್ ವೈಯರ್ ತುಂಡರಿಸಿ ಬಿದ್ದಿದ್ದು, ತುಂಡರಿಸಿ ಬಿದ್ದಿದ್ದ ವೈಯರನ್ನು ಸರಿಪಡಿಸದೇ ಜೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬಂದು ಜಡ್ಜ್ ಮನೆಯಲ್ಲಿ ಕಳ್ಳತನ – 8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಅರೆಸ್ಟ್

ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article