ಬೈಕ್ ಟ್ಯಾಕ್ಸಿಗೆ ಬ್ರೇಕ್ – ಓಲಾ ಸೇರಿ ಅಗ್ರಿಗೇಟರ್‌ ಕಂಪನಿಗಳಿಂದ ಸುಲಿಗೆ

Public TV
1 Min Read

ಬೆಂಗಳೂರು: ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ  (Bike Taxi) ನಿಷೇಧದ ಬೆನ್ನಲ್ಲೇ ಇದೀಗ ಅಗ್ರಿಗೇಟರ್‌ ಕಂಪನಿಗಳ ಆಟೋ ಪ್ರಯಾಣದ ದರ ಏರಿಕೆಯಾಗಿದೆ.

ಬೈಕ್ ಟ್ಯಾಕ್ಸಿಗೆ ಬ್ರೇಕ್ ಹಾಕಿರುವುದನ್ನೇ ಬಂಡವಾಳ ಮಾಡಿಕೊಂಡು ಓಲಾ (Ola) ಸೇರಿದಂತೆ ಕೆಲವು ಅಗ್ರಿಗೇಟ್ ಆಟೋ ಕಂಪನಿಗಳು ಇದೀಗ ಅಟೋ ದರವನ್ನು ಬೇಕಾಬಿಟ್ಟಿಯಾಗಿ ಏರಿಸಿವೆ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಕೊಡಗು | 7ನೇ ಹೊಸಕೋಟೆ ಗ್ರಾಪಂ ಸದಸ್ಯೆ ಪುತ್ರ ಬೆಂಗಳೂರಿನಲ್ಲಿ ಆತ್ಮಹತ್ಯೆ

ಉದಾಹರಣೆಗೆ ಟೌನ್‌ಹಾಲ್‌ನಿಂದ (Town Hall) ಮೆಜೆಸ್ಟಿಕ್ ಬಸ್ (Majestic) ನಿಲ್ದಾಣಕ್ಕಿರುವ ಅಂತರ 2.02 ಕಿ.ಮೀ. ನಿಯಮದ ಪ್ರಕಾರ 30-35 ರೂ. ತೆಗೆದುಕೊಳ್ಳಬೇಕು. ಆದರೆ ಓಲಾ 98 ರೂ. ತೆಗೆದುಕೊಳ್ಳುತ್ತಿದೆ. ಇದೇ ರೀತಿ ಹಲವೆಡೆ ಬೇಕಾಬಿಟ್ಟಿ ವಸೂಲಿ ಮಾಡುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಮೀಟರ್ ಪ್ರಕಾರ ಹಣ ತೆಗೆದುಕೊಳ್ಳಿ. ಹೀಗೆ ಹಗಲು ದರೋಡೆ ಮಾಡುತ್ತಿರುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2021ರಿಂದ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಜಾರಿಯಲ್ಲಿತ್ತು. ಇದು ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಲ್ಲಿ ಬೈಕ್ ಟ್ಯಾಕ್ಸಿ ಸವಾರರ ಮೇಲೆ ಹಲ್ಲೆ ಸಹ ನಡೆದಿತ್ತು. ಈ ಬೆನ್ನಲ್ಲೇ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್ನ ಏಕಸದಸ್ಯ ಪೀಠವು, ಏ.2ರಂದು ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು 6 ವಾರದೊಳಗೆ ನಿಲ್ಲಿಸುವಂತೆ ಆದೇಶಿಸಿತ್ತು.

ನ್ಯಾಯಾಲಯ ನೀಡಿದ್ದ 6 ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದಾಗ್ಯೂ, ರ‍್ಯಾಪಿಡೊ, ಓಲಾ ಮತ್ತು ಉಬರ್ ಸೇರಿದಂತೆ ಬೈಕ್ ಟ್ಯಾಕ್ಸಿ ನಿರ್ವಾಹಕರು ಆದೇಶ ವಿಸ್ತರಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದರು. ಈ ವಿನಂತಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲು ಗಡುವನ್ನು ಜೂ.15ರವರೆಗೆ ವಿಸ್ತರಿಸಿದ್ದರು.ಇದನ್ನೂ ಓದಿ: Bengaluru | ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಸ್ಕೂಲ್ ವ್ಯಾನ್ – ಸವಾರ ಬಚಾವ್

Share This Article