ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿದ ಬೆನ್ನಲ್ಲೇ ಮೂರು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಬೌನ್ಸ್ ಬೈಕ್‍ಗಳು ಹೊಸ ರೂಪ, ಹೊಸ ನಿಯಮದೊಂದಿಗೆ ಮತ್ತೆ ರೋಡಿಗಿಳಿತ್ತಿವೆ.
ಬೆಂಗಳೂರಲ್ಲಿ (Bengaluru) ಒಂದೆಡೆ ಅಗ್ರೀಗೇಟರ್ ಕಂಪನಿಗಳಾದ ಒಲಾ – ಊಬರ್‌ಗಳಿಂದ (Ola – Uber) ಹಗಲು ದರೋಡೆ ನಡೆಯುತ್ತಿದೆ. ಮತ್ತೊಂದೆಡೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಂದ್ ಆಗಿದೆ. ಹೀಗಾಗಿ ಪ್ರತಿನಿತ್ಯ ಕೆಲಸ ನಿರ್ವಹಿಸೋ ಜನರಿಗೆ ತೊಂದರೆಯಾಗುತ್ತಿದೆ. ಇದರ ನಡುವೆ ಮೂರು ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಬೌನ್ಸ್ ಬೈಕ್ ಬಾಡಿಗೆ ಸರ್ವಿಸ್ ಆರಂಭಿಸಲಾಗಿದೆ. ಇದನ್ನೂ ಓದಿ: ಮುಸ್ಲಿಂ ಓಲೈಕೆಗಾಗಿ ಸಂವಿಧಾನಕ್ಕೆ 370ನೇ ವಿಧಿ ಸೇರಿಸಿದ್ದೇ ನೆಹರೂ: ಛಲವಾದಿ ಕಿಡಿ
ರಾಜ್ಯ ಸಾರಿಗೆ ಇಲಾಖೆಯ ರೆಂಟ್ ಎ ಮೋಟಾರ್ ಸೈಕಲ್ ಸ್ಕೀಮ್ – 1987ರಲ್ಲಿ ಅನುಮತಿ ಪಡೆದು ಈ ಬೈಕ್ ಸರ್ವಿಸ್ ನೀಡಲಾಗ್ತಿದೆ. ನಗರದಲ್ಲಿ ಮತ್ತೆ ಫೀಲ್ಡಿಗಿಳಿದ ಈ ಬಾಡಿಗೆ ಬೈಕ್‍ಗಳು ಬೌನ್ಸ್ ಎಲೆಕ್ಟ್ರಿಕ್ ಬೈಕ್‍ಗಳಾಗಿದ್ದು, ಮೊದಲ ಹಂತದಲ್ಲಿ ಗಿಗ್ ವರ್ಕರ್ಸ್‍ಗೆ ಅಂದರೆ ಪುಡ್ ಡೆಲಿವರಿ, ಕೊರಿಯರ್ ಬಾಯ್ಸ್, ಸೇಲ್ಸ್ ಮ್ಯಾನ್‍ಗಳಿಗೆ ರೆಂಟ್ ಕೊಡ್ತಿವೆ. ಈಗಾಗಲೇ ನಗರದಲ್ಲಿ ಒಂದು ಸಾವಿರ ಬೈಕ್‍ಗಳು ರಸ್ತೆಗಿಳಿದಿದ್ದು, ಒಂದು ದಿನಕ್ಕೆ 240-280 ರೂ.ಅಂತೆ ಚಾರ್ಜ್ ಮಾಡಲಾಗ್ತಿದೆ. ಮಿನಿಮಮ್ ಮೂರು ದಿನಕ್ಕೆ ಬುಕ್ಕಿಂಗ್ ಮಾಡಬೇಕಾಗುತ್ತದೆ. ನಗರದ ಜೆಪಿ ನಗರ, ಹೂಡಿ, ಯಲಹಂಕ, ಆರ್.ಆರ್ ನಗರ, ಹೆಚ್ ಎಸ್ ಆರ್ ಲೇಔಟ್‍ಗಳಲ್ಲಿ ಹಬ್ ಮಾಡಲಾಗಿದೆ.
ಮೂರು ವರ್ಷದ ಹಿಂದೆ ಕೋವಿಡ್ ಸಂಕಷ್ಟದಲ್ಲಿ ಹೆಲ್ಮೆಟ್ ಕಳ್ಳತನ, ಬೈಕ್ ಪಾಕಿರ್ಂಗ್, ಡ್ಯಾಮೇಜ್ ಹೀಗೆ ಹಲವು ಸಮಸ್ಯೆಗಳಿಂದಾಗಿ ಈ ಬೈಕ್ ಬಾಡಿಗೆ ಸೇವೆ ನಿಲ್ಲಿಸಲಾಗಿತ್ತು. ಇದೀಗ ಈಗ ಹೊಸ ರೂಲ್ಸ್‍ಗಳೊಂದಿಗೆ ಸೇವೆ ಪುನರಾರಂಭಿಸಲಾಗಿದೆ. ಯಾವ ಹಬ್‍ನಿಂದ ತೆಗೆದುಕೊಂಡು ಹೋಗ್ತಾರೋ ಅದೇ ಹಬ್‍ಗೆ ಟೈಮ್ ಡ್ಯೂರೇಷನ್ ಮುಗಿದ ನಂತರ ತಂದು ಕೊಡಬೇಕು. ವಾಹನ ಸವಾರರ ಕಂಟ್ರೋಲ್ ಸಹ ಇರಲಿದೆಯಂತೆ.
ಈಗಾಗಲೇ ಬೆಂಗಳೂರು ಹಾಗೂ ದೆಹಲಿಯಲ್ಲಿ ಆರಂಭಗೊಂಡಿರೋ ಈ ಬೌನ್ಸ್ ಬೈಕ್ ಸರ್ವಿಸ್‍ಗೆ ಗಿಗ್ ವರ್ಕರ್ಸ್‍ನಿಂದ ಉತ್ತಮ ರೆಸ್ಪಾನ್ಸ್ ದೊರೆತಿದೆ. ಇದನ್ನೂ ಓದಿ: Heart Attack | ರಾಜ್ಯದಲ್ಲಿಂದು ಐವರು ಬಲಿ – ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ರಾಜಣ್ಣ ಸೂಚನೆ