ನೆಲಮಂಗಲ| ರಸ್ತೆ ಗುಂಡಿ ತಪ್ಪಿಸಲು ಹೋಗಿ ಬಿದ್ದ ಸವಾರ ಚಿಕಿತ್ಸೆ ಫಲಿಸದೇ ಸಾವು

1 Min Read

ಬೆಂಗಳೂರು ಗ್ರಾಮಾಂತರ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗಿ ಬೈಕ್‌ನಿಂದ ಬಿದ್ದ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಘಟನೆ ನೆಲಮಂಗಲದಲ್ಲಿ (Nelamangala) ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸುಭಾಷ್ ನಗರದ ಬಜಾಜ್ ಶೋ ರೂಮ್ ಬಳಿ ಅವಘಡ ಸಂಭವಿಸಿದೆ. ಇಸ್ಲಾಂಪುರದ ನಿವಾಸಿ ತಬ್ರೇಜ್ ಸಾವನ್ನಪ್ಪಿರುವ ಯುವಕ. ಬೈಕ್‌ನಲ್ಲಿ ತೆರಳುವ ವೇಳೆ ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗಿ ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಹೋಟೆಲ್‌ನಲ್ಲಿ ತಪ್ಪಾಗಿ ಬೇರೆ ರೂಮ್ ಬಾಗಿಲು ತಟ್ಟಿದ ಮಹಿಳೆ – ಎಣ್ಣೆ ಮತ್ತಲ್ಲಿದ್ದ ಮೂವರಿಂದ ಗ್ಯಾಂಗ್‌ ರೇಪ್‌

ಪೈಪ್‌ಲೈನ್ ಮಾಡಲು ತೆಗೆದಿದ್ದ ಗುಂಡಿ ಸಂಪೂರ್ಣವಾಗಿ ಮುಚ್ಚದ ಪರಿಣಾಮ ಅಪಘಾತವಾಗಿದೆ. ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಾನೆ. ಗುಂಡಿ ತಪ್ಪಿಸಲು ಹೋಗಿ ಅಪಘಾತವಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಕಾಲಿನಿಂದ ಒದ್ದು ವಿಕೃತಿ – ಪಕ್ಕದ್ಮನೆ ನಿವಾಸಿಯಿಂದ ಕೃತ್ಯ

Share This Article