ಯೋಧರ ಮಕ್ಕಳ ಶಿಕ್ಷಣಕ್ಕಾಗಿ ಧನ ಸಂಗ್ರಹಕ್ಕೆ ಮಹಿಳೆಯರಿಂದ ಬೈಕ್ ಜಾಥಾ

Public TV
1 Min Read

ಬೆಂಗಳೂರು: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಸಂತಾ ಕ್ಲಾಸ್ ಪೋಷಾಕು ತೊಟ್ಟು ಮಹಿಳೆಯರು ಬೃಹತ್ ಬೈಕ್ ಜಾಥಾ ನಡೆಸಿದರು.

ನರದಲ್ಲಿಂದು ಮಹಿಳಾ ಸಂಘಟನೆ, ಶೀಫಾರ್ ಸೊಸೈಟಿ ಮತ್ತು ಟಸ್ಕರ್ ಹರ್ಲಿ ವೋನರ್ಸ್ ಗ್ರೂಪ್‌ನಿಂದ ಬೈಕ್ ಜಾಥಾ ನಡೆಸಿದರು. ಈ ಜಾಥಾದಲ್ಲಿ ಸೇನಾ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹ ಆಕರ್ಷಣೀಯವಾಗಿತ್ತು. 100 ಮಹಿಳೆಯರು ರಂಗು ರಂಗಿನ ಸಂತಾ ಕ್ಲಾಸ್ ವೇಷತೊಟ್ಟು ಬೈಕ್‌ನಲ್ಲಿ ಸಂಚರಿಸಿ ಗಮನ ಸೆಳೆದರು.

ಶೀಫಾರ್ ಸೊಸೈಟಿ ಸಂಸ್ಥಾಪಕ ಸದಸ್ಯರಾದ ಹರ್ಷಿಣಿ ವೆಂಕಟೇಶ್, ವಿದ್ಯಾ ಮಂಜುನಾಥ್, ಶಾಲಿನಿ ದೀಪಕ್, ಕವಿತಾ ಪ್ರಭಾಕರ್ ನೇತೃತ್ವದ ತಂಡ ಬೈಕ್ ಜಾಥಾ ನಡೆಸಿದರು. ಜಾಥಾಗೆ ನಗರದ ಚಾನ್ಸರಿ ಪೆವಿಲಿಯನ್‌ನ ಬಳಿ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಚಾನ್ಸರಿ ಪೆವಲಿಯನ್ ಹೋಟೆಲ್ ನಿರ್ದೇಶಕ ಭಾಸ್ಕರ್ ರಾಜು ಚಾಲನೆ ನೀಡಿದರು.

ಚಾನ್ಸರಿ ಪೆವಲಿಯನ್ ಹೋಟೆಲ್ ಮುಂಭಾಗದಿಂದ ರೆಸಿಡೆನ್ಸಿ ರಸ್ತೆ, ಮೆಯೋ ಹಾಲ್, ಎಂ.ಜಿ. ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ, ಹಡ್ಸನ್ ಸರ್ಕಲ್, ಕಂಠೀರವ ಸ್ಟೇಡಿಯಂ, ಮಲ್ಯ ಆಸ್ಪತ್ರೆ ಮೂಲಕ ಹಾದುಹೋಗಿ ಮತ್ತೆ ಚಾನ್ಸರಿ ಪೆವಿಲಿಯನ್ ಹೋಟೆಲ್ ಬಳಿ ಜಾಥಾ ಕೊನೆಗೊಂಡಿತು. ಇದನ್ನೂ ಓದಿ: ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

ಶೀಫಾರ್ ಸೊಸೈಟಿಯು ಸೇನಾ ಯೋಧರ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಕೋಲಾರ ಜಿಲ್ಲೆಯ ಎರಡು ಗ್ರಾಮಗಳ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಕಂಪ್ಯೂಟರ್‌ಗಳನ್ನು ಒದಗಿಸುತ್ತಿದೆ. ಈ ಗ್ರಾಮಗಳ 200 ಕುಟುಂಬಗಳಿಗೆ ಶೀಫಾರ್ ಸೊಸೈಟಿಯಿಂದ ಸೋಲಾರ್ ಪೆನಲ್‌ಗಳ ಕಿಟ್‌ಗಳನ್ನು ಒದಗಿಸಿದೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್‍ಮಸ್ ಸಂಭ್ರಮ ಹೇಗಿತ್ತು ಗೊತ್ತಾ?

ಸ್ಪರ್ಶ ಫೌಂಡೇಷನ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆಫ್ ಬೆಂಗಳೂರು, ಇಕೆಬಾನ ಅಂತಾರಾಷ್ಟ್ರೀ ವಿಜಯಲಕ್ಷ್ಮಿ ಟೂರಿಸ್ಟ್ ಅಂಡ್ ಟೈಟಾನ್ ಸಂಸ್ಥೆ, ವೈಸ್ ಮಾರ್ಷಲ್ ಬಿ.ಕೆ.ಮುರುಳಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *