ಬಸ್‌ಗೆ ಬೈಕ್ ಅಡ್ಡಬಂದಿದ್ದಕ್ಕೆ ಡ್ರೈವರ್, ನಿರ್ವಾಹಕನ ಜೊತೆ ಬೈಕ್ ಸವಾರನ ಹೊಡೆದಾಟ

Public TV
1 Min Read

ರಾಯಚೂರು: ಕೆಎಸ್‌ಆರ್‌ಟಿಸಿ (KSRTC) ಬಸ್‌ಗೆ ಬೈಕ್ ಸವಾರ ಅಡ್ಡಬಂದು ಚಾಲಕ, ನಿರ್ವಾಹಕ ಮತ್ತು ಬೈಕ್ ಸವಾರ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂಧನೂರು (Sindhanuru) ನಗರದ ಪ್ರವಾಸಿ ಮಂದಿರದ ಎದುರು ನಡೆದಿದೆ.

ಗಂಗಾವತಿಯಿಂದ ಸಿಂಧನೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಅಡ್ಡಬಂದಿದ್ದು, ಈ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಬಸ್‌ಗೆ ಬೈಕ್ ಅಡ್ಡಬಂದಿದ್ದನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಪ್ರಶ್ನಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.ಇದನ್ನೂ ಓದಿ: ಮೈಕ್ರೋRNA ಆವಿಷ್ಕಾರ – ವಿಕ್ಟರ್‌, ಗ್ಯಾರಿಗೆ ನೊಬೆಲ್‌ ಪುರಸ್ಕಾರ

ಬಸ್ ಚಾಲಕ, ನಿರ್ವಾಹಕ ಹಾಗೂ ಬೈಕ್ ಚಾಲಕ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ವೇಳೆ ಟ್ರಾಫಿಕ್ ಜಾಮ್ ಉಂಟಾಗಿ, ಇತರ ವಾಹನ ಸವಾರರು ಪರದಾಡುವಂತಾಯಿತು. ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article