ಗದಗ: TVS ಬೈಕ್‍ಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಹೊಂಬಳ ರಸ್ತೆಯಲ್ಲಿ ನಡೆದಿದೆ.
ಮಂಜುನಾಥ್ ಕಲಬಂಡಿ(25) ಮೃತ ರೈತ. ಇವರು ಗದಗ ನಗರದ ಹಾಳದಿಬ್ಬ ನಿವಾಸಿಯಾಗಿದ್ದರು. ಮಂಜುನಾಥ್ ಅವರ ಕುಟುಂಬಸ್ಥರು ಹೊಂಬಳ ರಸ್ತೆಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಊಟದ ಬುತ್ತಿ ತೆಗೆದುಕೊಂಡು ಜಮೀನಿಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯ ಈ ದುರ್ಘಟನೆ ನಡೆದಿದೆ. ಹಿಂಬದಿಯಿಂದ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣಕ್ಕೆ ಸಿಗದೇ ಸುಮಾರು 20 ಮೀ.ವರೆಗೆ ದೂರ ಸಾಗಿದೆ. ಕಾರು ಚಾಲಕ ಪರಾರಿ ಆಗಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ದೇಶದ ದೈತ್ಯ ಅವಳಿ ಕಟ್ಟಡ ನೆಲಸಮ – ಅಕ್ಕಪಕ್ಕದ ಕಾಂಪ್ಲೆಕ್ಸ್‌ಗಳ ಗೋಡೆ, ಕಿಟಕಿಗಳು ಡ್ಯಾಮೇಜ್
ಕಳೆದ ಒಂದು ವಾರದ ಹಿಂದೆ ಇದೇ ರಸ್ತೆಯಲ್ಲಿ ಬಸ್‍ವೊಂದು ಬೈಕ್‍ಗೆ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಇದೀಗ ಇದೇ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಿರತೆ ಸೆರೆಗೆ ಕೈಯಲ್ಲಿ ಕೋಲು ಹಿಡಿದು ಬಂದ ಮಹಿಳಾಮಣಿಗಳು