ಹೀಗೊಂದು ಪ್ರೇಮ ಕಥೆ? – ಅವಳ ಗಂಡನನ್ನು ಇವಳು, ಇವಳ ಪತಿಯನ್ನು ಅವಳು ಮದುವೆಯಾದ್ರು!

By
1 Min Read

ಪಾಟ್ನಾ: ಬಿಹಾರ್‌ನಲ್ಲಿ (Bihar) ವಿಲಕ್ಷಣ ಪ್ರೇಮ ಕಥೆಯೊಂದು ವರದಿಯಾಗಿದೆ. ಅವನ ಹೆಂಡತಿಯನ್ನು ಇವನು ಮತ್ತು ಇವನ ಹೆಂಡತಿಯನ್ನು ಅವನು ಮದುವೆಯಾಗಿದ್ದಾರೆ.

ಹೌದು, ಬಿಹಾರ್‌ನ ಖಗಾರಿಯಾದಲ್ಲಿ ಇಂತಹದ್ದೊಂದು ಪ್ರೇಮ ಕಥೆ ಅಚ್ಚರಿ ಮೂಡಿಸಿದೆ. ಇಬ್ಬರು ಮಹಿಳೆಯರು ಪರಸ್ಪರರ ಗಂಡಂದಿರನ್ನು ಪ್ರೀತಿಸಿದ್ದರು. ಹೀಗಾಗಿ ಆಕೆಯ ಗಂಡನನ್ನು ಈಕೆ ಮತ್ತು ಈಕೆ ಗಂಡನನ್ನು ಆಕೆ ವರಿಸಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು 38 ವರ್ಷದ ವ್ಯಕ್ತಿ ದುರ್ಮರಣ

ನೀರಜ್ ಕುಮಾರ್ ಸಿಂಗ್ ಮತ್ತು ರೂಬಿ ದೇವಿ 2009 ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹೀಗಿದ್ದೂ, ರೂಬಿ ತನ್ನ ಪೋಷಕರ ಮನೆಯ ಬಳಿ ವಾಸಿಸುತ್ತಿದ್ದ ಮುಖೇಶ್ ಕುಮಾರ್ ಸಿಂಗ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಕಳೆದ ವರ್ಷ ಫೆಬ್ರವರಿಯಲ್ಲಿ ರೂಬಿ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಮುಖೇಶ್‌ನೊಂದಿಗೆ ಓಡಿ ಹೋದಳು. ಇತ್ತ ಪತಿ ನೀರಜ್ ಜೊತೆ ಹೆಣ್ಣು ಮಗುವನ್ನು ಮಾತ್ರ ಬಿಟ್ಟು ಹೋಗಿದ್ದಳು.

ಮುಖೇಶ್‌ನ ಹೆಂಡತಿಯ ಹೆಸರು ಕೂಡ ರೂಬಿ ದೇವಿ. ಈಕೆ ತನ್ನ ಗಂಡನೊಂದಿಗೆ ಓಡಿ ಹೋದ ಮಹಿಳೆಯ ಪತಿ (ನೀರಜ್ ರೂಬಿ) ಬಗ್ಗೆ ತಿಳಿದುಕೊಂಡಳು. ನಂತರ ಇಬ್ಬರೂ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. ಕೊನೆಗೆ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು. ಫೆಬ್ರವರಿ 18 ರಂದು ಇಬ್ಬರೂ ನ್ಯಾಯಾಲಯದಲ್ಲಿ ವಿವಾಹವಾದರು. ಇದನ್ನೂ ಓದಿ: ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

ನೀರಜ್‌ ರೂಬಿ ತನ್ನ ಎರಡನೇ ಹೆಂಡತಿಯ ಮಕ್ಕಳನ್ನು ಮನೆಯಲ್ಲಿ ಪೋಷಿಸಲು ಒಪ್ಪಿಕೊಂಡ. ಇಬ್ಬರೂ ನವ ದಂಪತಿ ಈಗ ಮಧ್ಯಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *