ಬಿಹಾರದ ಮತ್ತೆರಡು ಸರ್ವೆಗಳಲ್ಲೂ ಎನ್‌ಡಿಎಗೆ ಅಧಿಕಾರ – ಆಕ್ಸಿಸ್ ಸರ್ವೆಯಲ್ಲಿ ಆರ್‌ಜೆಡಿ ಅತಿದೊಡ್ಡ ಪಕ್ಷ

Public TV
1 Min Read

– ಮೋದಿ ಮೈತ್ರಿಕೂಟ ಮುನ್ನಡೆ ಎಂದ ಚಾಣಕ್ಯ

ಪಾಟ್ನಾ: ಬಿಹಾರ ವಿಧಾನಸಭೆಯ ಚುನಾವಣೆ ಮತ್ತಷ್ಟು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬಿದ್ದಿವೆ.

ಆಕ್ಸಿಸ್ ಮೈ ಇಂಡಿಯಾ ಸರ್ವೇಯಲ್ಲಿ ಜಿದ್ದಾಜಿದ್ದಿನ ಹೋರಾಟವಿದ್ದರೂ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರ ಸಿಗೋ ಸಾಧ್ಯತೆ ಇದೆ. ಆದರೆ, ಆರ್‌ಜೆಡಿ ಅತಿದೊಡ್ಡ ಪಕ್ಷವಾಗಿ 67-76 ಸ್ಥಾನ ಸಿಕ್ಕಿದೆ. ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ, ಎನ್‌ಡಿಎ: 121-141 ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಅದರಲ್ಲಿ ಬಿಜೆಪಿ 50-56, ಜೆಡಿಯು 56-62, ಎಲ್‌ಜೆಪಿ 11-16 ಸ್ಥಾನ ಸಿಗಲಿದೆ ಎಂದು ಊಹಿಸಿದೆ. ಮಹಾಘಟಬಂಧನ್‌ಗೆ 98-118 ಸ್ಥಾನ ಸಿಗುವ ಸಾಧ್ಯತೆ ಇದೆ ಎಂದಿದೆ. ಅದರಲ್ಲಿ ಆರ್‌ಜೆಡಿ 67-76, ಕಾಂಗ್ರೆಸ್ 17-21 ಸೀಟ್ ಸಿಗಬಹುದು ಎಂದಿದೆ. ಇನ್ನು ಇತರರು 1-5 ಸ್ಥಾನ ಲಭಿಸಬಹುದು ಎಂದಿದೆ.

ಟುಡೇಸ್ ಚಾಣಕ್ಯ ಎನ್‌ಡಿಎಗೆ ಭರಪೂರ ಗೆಲುವು ಸಾಧ್ಯತೆ ಎಂದು ಹೇಳಿದೆ. ಎನ್‌ಡಿಎ: 160, ಎಂಜಿಬಿಗೆ 77, ಇತರರಿಗೆ 6 ಸ್ಥಾನ ಸಿಗುವ ಸಾಧ್ಯತೆ ಎಂದು ಅಂದಾಜಿಸಿದೆ.

Share This Article