ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ನಂತರ ಬಿಹಾರದಾದ್ಯಂತ (Bihar) 56 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಚುನಾವಣಾ (Election Commission) ಆಯೋಗ ಹೇಳಿದೆ.
ಪರಿಶೀಲಿಸದ ಮತದಾರರ ಪಟ್ಟಿಯಲ್ಲಿ 20 ಲಕ್ಷ ಜನರು ಮೃತಪಟ್ಟಿದ್ದರೆ, 28 ಲಕ್ಷ ಮಂದಿ ತಮ್ಮ ಪ್ರಾಥಮಿಕ ನಿವಾಸವು ಈಗ ಬೇರೆ ರಾಜ್ಯದಲ್ಲಿದೆ ಎಂದಿದ್ದಾರೆ. ಏಳು ಲಕ್ಷ ಜನರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿರುವ ಹೆಚ್ಚುವರಿ ಒಂದು ಲಕ್ಷ ಜನರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದಿದೆ. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆ ವೇಳೆ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕಳ್ಳಾಟ: ರಾಹುಲ್ ಗಾಂಧಿ
15 ಲಕ್ಷ ಮತದಾರರು ಪರಿಶೀಲನಾ ನಮೂನೆಗಳನ್ನು ಹಿಂತಿರುಗಿಸಿಲ್ಲ. ಅರ್ಜಿಯನ್ನು ಮರಳಿಸದ ಕಾರಣ ಈ ವರ್ಷದ ಕೊನೆಯಲ್ಲಿ ಮತದಾನ ಪ್ರಾರಂಭವಾದಾಗ ಅವರೂ ಸಹ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 30 ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ. ಇದನ್ನೂ ಓದಿ: ಆಧಾರ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಗಳು ವಿಶ್ವಾಸಾರ್ಹ ದಾಖಲೆಗಳಲ್ಲ: ಸುಪ್ರೀಂಗೆ ಚುನಾವಣಾ ಆಯೋಗ ಅಫಿಡವಿಟ್
ಚುನಾವಣಾ ಸಮಯದಲ್ಲೇ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಶ್ನಿಸಿ ವಿಪಕ್ಷಗಳು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿಗೆ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ತಡೆ ನೀಡದೇ ಚುನಾವಣಾ ಆಯೋಗಕ್ಕೆ ವಿಶೇಷ ತೀವ್ರ ಪರಿಷ್ಕರಣೆ ನಡೆಸಲು ಅನುಮತಿ ನೀಡಿತ್ತು.