ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ (Bihar Election Results) ಮತ ಎಣಿಕೆ ನಡೆಯುತ್ತಿದ್ದು ಮುಸ್ಲಿಮರೇ (Muslims) ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿಜೆಪಿ (BJP) ಮುನ್ನಡೆ ಸಾಧಿಸಿದೆ.
ಒಟ್ಟು 36 ಕ್ಷೇತ್ರಗಳಲ್ಲಿ ಮುಸ್ಲಿಮರು ನಿರ್ಣಾಯಕರಾಗಿದ್ದಾರೆ. ಮಧ್ಯಾಹ್ನ 3:30ರ ಟ್ರೆಂಡ್ ಪ್ರಕಾರ ಎನ್‌ಡಿಎ (NDA) 25 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಬಿಜೆಪಿ 15 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ಕೇವಲ 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳಾ ಮತದಾರರು ಮತವನ್ನು ಚಲಾವಣೆ ಮಾಡಿದ್ದರು. ಹೀಗಾಗಿ ಮುಸ್ಲಿಮ್ ಮಹಿಳೆಯರು ಎನ್‌ಡಿಎ ಮತ ಹಾಕಿರುವ ಸಾಧ್ಯತೆಯಿದೆ.
ಓವೈಸಿ ಅವರು ಈ ಬಾರಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೇ 25 ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ AIMIM ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಇದು ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ಭಾರೀ ಹೊಡೆತವನ್ನು ನೀಡಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಬರಬೇಕಿದ್ದ ಮತಗಳು AIMIM ಬಿದ್ದ ಕಾರಣ ಮಹಾಘಟಬಂಧನ್‌ಗೆ ಹಿನ್ನಡೆಯಾಗಿದೆ.
