ಪಾಟ್ನಾ: ಬಿಹಾರದಲ್ಲಿ `ನಿ-ಮೋ’ ಜೋಡಿ ಕಮಾಲ್ ಮಾಡಿದ್ರೆ, ʻತೇ-ರಾʼ (ತೇಜಸ್ವಿ ಯಾದವ್ – ರಾಹುಲ್ ಗಾಂಧಿ) ಜೋಡಿ ಫ್ಲಾಪ್ ಆಗಿದೆ. ಅದ್ರಲ್ಲೂ ರಾಹುಲ್ ಗಾಂಧಿ (Rahul Gandhi) ಚರಿಷ್ಮಾ ಬಿಹಾರದಲ್ಲಿ (Bihar) ಶೈನ್ ಆಗಿಲ್ಲ. ರಾಹುಲ್ ಗಾಂಧಿಯ ವೋಟ್ ಚೋರಿ, ನಿರುದ್ಯೋಗ ಆರೋಪ, ಗ್ಯಾರಂಟಿ, ರ‍್ಯಾಲಿಗಳು ಮತದಾರರನ್ನ ಸೆಳೆಯುವಲ್ಲಿ ಫೇಲ್ ಆಗಿವೆ.
ರಾಹುಲ್ ಗಾಂಧಿ ʻಮತ ಅಧಿಕಾರ ಯಾತ್ರೆʼ ನಡೆಸಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿದೆ. ರ‍್ಯಾಲಿಯಲ್ಲಿ ಜನ ಸೇರುತ್ತಿದ್ದರೇ ಹೊರತು ಅವು ಮತಗಳಾಗಿ ಪರಿವರ್ತನೆಯಾಗಿಲ್ಲ. ಬಿಹಾರ ಫಲಿತಾಂಶ ರಾಹುಲ್ ಗಾಂಧಿಗೆ ಭಾರೀ ಮುಖಭಂಗ ತಂದಿದೆ. ಕಳೆದ ಆಗಸ್ಟ್‌ನಲ್ಲಿ ಸಸಾರಾಂನಿಂದ ಪಾಟ್ನಾವರೆಗೆ ರಾಹುಲ್ ʻಮತ ಅಧಿಕಾರ ಯಾತ್ರೆʼ ನಡೆಸಿದ್ದರು. 25 ಜಿಲ್ಲೆ, 110 ವಿಧಾನಸಭಾ ಕ್ಷೇತ್ರಗಳನ್ನ ದಾಟಿ, ಸುಮಾರು 1,300 ಕಿ.ಮೀ. ಯಾತ್ರೆ ಸಾಗಿತ್ತು. ಆದ್ರೆ ಈ ಮಾರ್ಗದಲ್ಲಿ ಒಂದೇ ಒಂದು ಕ್ಷೇತ್ರವೂ ಕಾಂಗ್ರೆಸ್ ಗೆಲ್ಲೋಕೆ ಆಗಲಿಲ್ಲ. ರಾಹುಲ್ ಗಾಂಧಿಯ ವೋಟರ್ ಅಧಿಕಾರ್ ಯಾತ್ರೆ ಬಿಹಾರದಲ್ಲಿ ಯಾವ ಮ್ಯಾಜಿಕ್ ಮಾಡಲಿಲ್ಲ.
ಮಹಾಘಟಬಂಧನ್ (Mahagathbandhan) ಸೋತಿದ್ದೆಲ್ಲಿ..?
* ರಾಹುಲ್ ಗಾಂಧಿ ರ‍್ಯಾಲಿ ನಡೆಸಿದರೂ ಕಾಂಗ್ರೆಸ್‌ಗೆ ಬಹುದೊಡ್ಡ ಹಿನ್ನಡೆ
* 25 ಜಿಲ್ಲೆಗಳು, 110 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಪ್ರಚಾರ
* ರಾಹುಲ್ ಹೋದ ಕಡೆಯಲೆಲ್ಲಾ ಕಾಂಗ್ರೆಸ್‌ಗೆ ಸೋಲು
* 61 ಕ್ಷೇತ್ರಗಳ ಪೈಕಿ ಕೇವಲ 5 ಕ್ಷೇತ್ರಗಳಲ್ಲಷ್ಟೇ ಗೆಲುವು
* ಯಶಸ್ಸು ಕಾಣದ ರಾಹುಲ್ ಗಾಂಧಿ ವೋಟ್ ಚೋರಿ ಅಭಿಯಾನ
* ಕಾಂಗ್ರೆಸ್ ಪಕ್ಷದ ಸಹವಾಸ ಮಾಡಿ ಕೆಟ್ಟ ಆರ್‌ಜೆಡಿ
* ಜಾತಿ ಸಮೀಕರಣದಲ್ಲಿ ದೌರ್ಬಲ್ಯ
* ಮುಸ್ಲಿಂ-ಯಾದವ ಸಮೀಕರಣಕ್ಕೆ ಸೀಮಿತ
* ಉನ್ನತ ಜಾತಿಗಳು & ಯಾದವೇತರರು ಎನ್‌ಡಿಎಗೆ ಬೆಂಬಲ
* ಚುನಾವಣೆಗೂ ಮುನ್ನ ಎನ್‌ಡಿಎ 10 ಸಾವಿರ ಘೋಷಣೆ ಎಫೆಕ್ಟ್
* ಆರ್‌ಜೆಡಿಯ ʻಜಂಗಲ್ ರಾಜ್ʼ ಭಯದಿಂದ ಹೊರಬಾರದ ಜನ
* ಮಹಾಘಟಬಂಧನ್ ಮತ ಇಬ್ಭಾಗ ಮಾಡಿದ ಪ್ರಶಾಂತ್ ಕಿಶೋರ್ ಪಕ್ಷ
* ಕಾಂಗ್ರೆಸ್-ಆರ್‌ಜೆಡಿ ಸೀಟು ಹೊಂದಾಣಿಕೆಯಿಂದಲೂ ಹೊಡೆತ
* ಸೀಟು ಹಂಚಿಕೆ ಬಿಕ್ಕಟ್ಟಿನಿಂದ ತಡವಾಗಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದು ಬಿಹಾರದಲ್ಲಿ ಮಹಾಘಟಬಂಧನ್ ಸೋಲಿಗೆ ಪ್ರಮುಖ ಕಾರಣಗಳಾಗಿವೆ.
