ಜಾತಿವಾರು, ಪ್ರಾದೇಶಿಕವಾರಿನಲ್ಲೂ ಎನ್‌ಡಿಎ ಕಮಾಲ್ – ಡಬಲ್ ಎಂಜಿನ್ ಅಭಿವೃದ್ಧಿಗೆ ಬಿಹಾರಿಗಳ ಬಹುಪರಾಕ್‌!

Public TV
2 Min Read

– ಮೇಲ್ವರ್ಗದ ಜೊತೆ ಎನ್‌ಡಿಎ ಕೈಹಿಡಿದ ಕೆಳವರ್ಗ
– ಮೋದಿ ಹೋದ ಕಡೆಯಲೆಲ್ಲಾ ಎನ್‌ಡಿಎ ಜಯಮಾಲೆ

ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ (NDA Alliance) ಐತಿಹಾಸಿಕ ಜಯ ಸಾಧಿಸಿದೆ. ಎಲ್ಲ ಎಕ್ಸಿಟ್‌ಪೋಲ್‌ಗಳನ್ನು ತಲೆಕೆಳಗು ಮಾಡಿ ಮತ್ತೆ ಅಧಿಕಾರಕ್ಕೇರಿದೆ. ಕಾಂಗ್ರೆಸ್ ಎಂದಿನಂತೆ ಹೇಳೋಕೆ ಹೆಸರಿಲ್ಲದಂತೆ ನೆಲಕಚ್ಚಿದೆ. ಕಾಂಗ್ರೆಸ್ ಪಕ್ಷವನ್ನು (Congress Party) ನೆಚ್ಚಿಕೊಂಡ ಆರ್‌ಜೆಡಿ ಮಣ್ಣು ಮುಕ್ಕಿದೆ. ಮತಪಟ್ಟಿ ಪರಿಷ್ಕರಣೆಗೆ ವಿರೋಧ, ಮತಕಳವು ಆರೋಪ, ಅತ್ಯಧಿಕ ಮತದಾನ, ಶೇ.47ರಷ್ಟು ಮಹಿಳಾ ಮತದಾರರಿಂದ ವೋಟಿಂಗ್ ದಾಖಲೆಗಳ ವಿಶೇಷತೆ ನಡುವೆ ನಡೆದ ಬಿಹಾರ ಎಲೆಕ್ಷನ್‌ನಲ್ಲಿ ಎನ್‌ಡಿಎ ಕೂಟ ಕಮಾಲ್ ಮಾಡಿದೆ. ಈ ಮೂಲಕ ನಿತೀಶ್ ಕುಮಾರ್-ನರೇಂದ್ರ ಮೋದಿ (Narendra Modi) ಜೋಡಿ ಮೋಡಿ ಮಾಡಿ ಅಧಿಕಾರಕ್ಕೆ ಬಂದಿದೆ.

ಅಲ್ಲದೇ ಬಿಹಾರ ಚುನಾವಣೆಯಲ್ಲಿ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಎಲ್ಲ ಜಾತಿಗಳೂ ಬಹುಪರಾಕ್ ಹೇಳಿವೆ. ಮೇಲ್ಜಾತಿಯಿಂದ ಹಿಡಿದು ಕೆಳಜಾತಿವರೆಗೆ ಮತದಾರರು ಮತ ಚಲಾಯಿಸಿದ್ದಾರೆ. ನರೇಂದ್ರ ಮೋದಿ, ನಿತೀಶ್‌ ಕುಮಾರ್‌, ಚಿರಾಗ್‌ ಪಾಸ್ವಾನ್‌ ಅವರ ಸಂಘಟಿತ ಪ್ರಯತ್ನಕ್ಕೆ ಎಲ್ಲಾ ಜಾತಿಗಳೂ ಕೈಹಿಡಿದಿವೆ. ಹಾಗಿದ್ರೆ, ಜಾತಿ ಲೆಕ್ಕಾಚಾರ ಎನ್‌ಡಿಎ ಕೈ ಹಿಡಿದಿದ್ದು ಹೇಗೆ ಅಂತ ನೋಡೋದಾದ್ರೆ…

ಕೈಹಿಡಿದ ಜಾತಿ ಲೆಕ್ಕಾಚಾರ..!
> ಜಾತಿ ಸಮೀಕರಣದ ಲೆಕ್ಕಾಚಾರದಲ್ಲೇ ಎನ್‌ಡಿಎ ಟಿಕೆಟ್ ಹಂಚಿಕೆ
> ದೇಶದಲ್ಲಿ ಮೊದಲ ಬಾರಿಗೆ ಜಾತಿಗಣತಿ ನಡೆಸಿರುವ ಬಿಹಾರ
> ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಒಬಿಸಿ, ಇಬಿಸಿ
> ಶೇಕಡಾ 27%ರಷ್ಟಿರುವ ಹಿಂದುಳಿದ ವರ್ಗಗಳು (ಒಬಿಸಿ)
> ಶೇಕಡಾ 36%ರಷ್ಟಿರುವ ಅತಿ ಹಿಂದುಳಿದ ವರ್ಗಗಳು (ಇಬಿಸಿ)
> 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿಶಾದ, ತೆಲೀ, ಲೋಹಾರ್, ಕುಮ್ಹಾರ್ ಜಾತಿ ನಿರ್ಣಾಯಕ
> ಮೇಲ್ಜಾತಿ ಜೊತೆಗೆ ಅತಿ ಹಿಂದುಳಿದ ಜಾತಿಗಳಿಂದಲೂ ಮತ

* ಬ್ರಾಹ್ಮಣರ ಪ್ರಾಬಲ್ಯರ ಕ್ಷೇತ್ರ
ಸೀಟ್ : 41
ಎನ್‌ಡಿಎ : 39
ಎಂಜಿಬಿ : 2

* ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ
ಸೀಟ್ : 39
ಎನ್‌ಡಿಎ : 26
ಎಂಜಿಬಿ : 7

* ರಜಪೂತ್ ಪ್ರಾಬಲ್ಯದ ಕ್ಷೇತ್ರ
ಜಾತಿ : ರಜಪೂತ್
ಸೀಟ್ : 61
ಎನ್‌ಡಿಎ : 52
ಎಂಜಿಬಿ : 8

* ಎಸ್‌ಸಿ ಪ್ರಾಬಲ್ಯದ ಕ್ಷೇತ್ರ
ಸೀಟ್ : 69
ಎನ್‌ಡಿಎ : 60
ಎಂಜಿಬಿ : 8

* ಎಸ್‌ಟಿ ಪ್ರಾಬಲ್ಯದ ಕ್ಷೇತ್ರಗಳು
ಸೀಟ್ : 6
ಎನ್‌ಡಿಎ : 3
ಎಂಜಿಬಿ : 3

ಬಿಹಾರ ಮೆಗಾ ರಿಸಲ್ಟ್
* ಒಟ್ಟು ಕ್ಷೇತ್ರ – 243
* ಸರಳ ಬಹುಮತ – 122
* ಎನ್‌ಡಿಎ – 202 (+80) (2020- 122)
* ಎಂಜಿಬಿ – 35 (-79) (2020-114)
* ಜೆಎಸ್‌ಪಿ – 0
* ಇತರೆ – 6

ಪಾರ್ಟಿವೈಸ್ ರಿಸಲ್ಟ್
* ಬಿಜೆಪಿ 89 (101)
* ಜೆಡಿಯು 85 (101)
* ಎಲ್‌ಜೆಪಿ 19 (29)
* ಹೆಚ್‌ಎಎಂ 5 (5)
* ಆರ್‌ಎಲ್‌ಎಂ 4 (5)
* ಆರ್‌ಜೆಡಿ 25 (143)
* ಕಾಂಗ್ರೆಸ್ 6 (61)
* ಎಂಐಎಂ 5 (25)

Share This Article