ಅತಿ ದೊಡ್ಡ ಪಕ್ಷ ಯಾವುದು? – ಬಿಜೆಪಿ, ಜೆಡಿಯು ಮಧ್ಯೆ ನೆಕ್‌-ಟು-ನೆಕ್‌ ಸ್ಪರ್ಧೆ

Public TV
1 Min Read

ಪಾಟ್ನಾ: ಸಾಧಾರಣವಾಗಿ ಚುನಾವಣೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ನೆಕ್‌ ಟು ನೆಕ್‌ ಫೈಟ್‌ ಇರುತ್ತದೆ. ಆದರೆ ಬಿಹಾರದಲ್ಲಿ (Bihar Election) ಈಗ ಆಡಳಿತರೂಢ ಜೆಡಿಯು (JDU) ಮತ್ತು ಬಿಜೆಪಿ (BJP) ಮಧ್ಯೆ ನೆಕ್‌ ಟು ನೆಕ್‌ ಸ್ಪರ್ಧೆ ನಡೆಯುತ್ತಿದೆ.

ಹೌದು. ಈ ಬಾರಿ ಅತಿ ಹೆಚ್ಚು ಸ್ಥಾನಗಳನ್ನು ಯಾವ ಪಕ್ಷ ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಯಾಕೆಂದರೆ ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಭಾರೀ ಮುನ್ನಡೆಯಲಿದೆ. ಎಷ್ಟು ಮುನ್ನಡೆಯಲಿದೆ ಎಂದರೆ ಮಹಾಘಟಬಂಧನ್‌ (Mahagathbandhan) ಪಕ್ಷಗಳಿಗಿಂತಲೂ ಈ ಎರಡೂ ಪಕ್ಷಗಳು ಭಾರೀ ಮುನ್ನಡೆಯಲ್ಲಿವೆ. ಇದನ್ನೂ ಓದಿ:  ಎನ್‌ಡಿಎ 190+ ಕ್ಷೇತ್ರಗಳಲ್ಲಿ ಮುನ್ನಡೆ, ಡಬಲ್‌ ಡಿಜಿಟ್‌ ದಾಟಲು ಪರದಾಡುತ್ತಿದೆ ಕಾಂಗ್ರೆಸ್‌

 

ಬಿಜೆಪಿ ಮತ್ತು ಜೆಡಿಯು 101 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಮಧ್ಯಾಹ್ನ 12 ಗಂಟೆಯ ಟ್ರೆಂಡ್‌ ಪ್ರಕಾರ ಬಿಜೆಪಿ 84, ಜೆಡಿಯು 76 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿವೆ. ಆದರೆ ಕೆಲ ಕ್ಷೇತ್ರಗಳಲ್ಲಿ ಜೆಡಿಯು ಅಲ್ಪ ಮತಗಳಿಂದ ಹಿನ್ನಡೆಯಲ್ಲಿದೆ.

ಆರ್‌ಜೆಡಿ 34, ಕಾಂಗ್ರೆಸ್‌ 5, ಇತರರು 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎನ್‌ಡಿಎ 190 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಮಹಾಘಟಬಂಧನ್‌ 49 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿವೆ.

Share This Article