ಇಂದು ಬಿಹಾರ ಎಲೆಕ್ಷನ್ ರಿಸಲ್ಟ್; ಗ್ಯಾರಂಟಿಗಳ ಭರಾಟೆ ಮಧ್ಯೆ ಗೆಲ್ಲೋದ್ಯಾರು?

Public TV
1 Min Read

– ಎಕ್ಸಿಟ್ ಪೋಲ್‌ಗಳ ಭವಿಷ್ಯ ನಿಜವಾಗುತ್ತಾ?
– ಮತ್ತೆ ಬಿಹಾರದಲ್ಲಿ ಅಧಿಕಾರ ಸ್ಥಾಪಿಸುತ್ತಾ ಎನ್‌ಡಿಎ?- ಮಹಾಘಟಬಂಧನ್‌ಗೆ ಒಲಿಯುತ್ತಾ ಬಿ’ಹಾರ’?

ಪಾಟ್ನಾ: ಜಿದ್ದಾಜಿದ್ದಿನ ಬಿಹಾರ ವಿಧಾನಸಭೆ (Bihar Results) ಚುನಾವಣೆ ಮುಗಿದಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ. ಎರಡೂ ಪಕ್ಷಗಳು ಗ್ಯಾರಂಟಿಗಳ ಮಹಾಪೂರವನ್ನೇ ಹರಿಸಿದ್ದು, ಬಿಹಾರ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ರಾಜ್ಯದ 46 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಬಿಹಾರದ ಮತ್ತೆರಡು ಸರ್ವೆಗಳಲ್ಲೂ ಎನ್‌ಡಿಎಗೆ ಅಧಿಕಾರ – ಆಕ್ಸಿಸ್ ಸರ್ವೆಯಲ್ಲಿ ಆರ್‌ಜೆಡಿ ಅತಿದೊಡ್ಡ ಪಕ್ಷ

ಸಮಸ್ಥಿಪುರದಲ್ಲಿ ಖಾಲಿ ಇವಿಎಂಗಳು ಪತ್ತೆಯಾಗಿದ್ದು, ಆರ್‌ಜೆಡಿ ಪ್ರತಿಭಟನೆ ಮಾಡಿದೆ. ಇವಿಎಂಗಳ ಟ್ಯಾಂಪರ್ ಆದರೆ ಬಿಹಾರದಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ಆದಂಥ ದಂಗೆ ಬಿಹಾರದಲ್ಲಿ ಆಗುತ್ತೆ ಅಂತ ಆರ್‌ಜೆಡಿ ನಾಯಕ ಸುನೀಲ್ ಸಿಂಗ್ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಹಿಂದೆ ಸಮಸ್ಥಿಪುರದ ಕಾಲೇಜ್‌ವೊಂದರಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳು ಸಿಕ್ಕಿದ್ದವು. ಆದರೆ, ಇವು ಪ್ರಾಯೋಗಿಕವಾಗಿ ಬಳಸಲಾಗಿದ್ದ ಸ್ಲಿಪ್‌ಗಳು ಅಂತ ಕೇಂದ್ರ ಚುನಾವಣಾ ಆಯೋಗವೇ ಸ್ಪಷ್ಟನೆ ಕೊಟ್ಟಿತ್ತು. ಇದನ್ನೂ ಓದಿ: 500 ಕೆಜಿ ಲಡ್ಡು, 5 ಲಕ್ಷ ರಸಗುಲ್ಲಾ; ಬಿಹಾರದಲ್ಲಿ ವಿಜಯೋತ್ಸವಕ್ಕೆ ಎನ್‌ಡಿಎ ಸಿದ್ಧತೆ

243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6, 11ರಂದು 2 ಹಂತದ ಮತದಾನ ಆಗಿದ್ದು, ಶೇ.67.13ರಷ್ಟು ಐತಿಹಾಸಿಕ ವೋಟಿಂಗ್ ದಾಖಲಾಗಿದೆ. ಈ ಬಾರಿ ಮಹಿಳೆಯರು ಶೇ.71ರಷ್ಟು ಮತದಾನ ಮಾಡಿದ್ದು, ಮಹಿಳೆಯರ ಮತ ನಿರ್ಣಾಯಕವಾಗಿದೆ.

ಅಧಿಕಾರಕ್ಕೇರಲು 122 ಸ್ಥಾನಗಳ ಸರಳ ಬಹುಮತ ಅಗತ್ಯವಾಗಿದ್ದು, ಎಕ್ಸಿಟ್ ಪೋಲ್‌ಗಳಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ಸಿಗುವ ಸಾಧ್ಯತೆಗಳು ಇವೆ. ದೀರ್ಘಾವಧಿ ಸಿಎಂ ಆಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ಐದನೇ ಬಾರಿ ಅಧಿಕಾರ ಚುಕ್ಕಾಣಿ ಹಿಡೀತಾರಾ..? ಅಥವಾ ಹೊಸ ಪಕ್ಷ ಅಧಿಕಾರಕ್ಕೆ ಬರಲಿದ್ಯಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಎಕ್ಸಿಟ್ ಪೋಲ್‌ಗಳು ಎನ್‌ಡಿಎಗೆ ಅಧಿಕಾರ ಸಿಗುತ್ತೆ ಅಂತ ಹೇಳಿವೆ. ಇಂಡಿಯಾ ಒಕ್ಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಈ ಸಮೀಕ್ಷೆ ಫಲಿತಾಂಶಗಳು ಸುಳ್ಳಾಗಲಿವೆ ಎಂದಿದ್ದಾರೆ.

Share This Article