ಇದೇ ನನ್ನ‌ ಕೊನೆಯ FB ಲೈವ್ ಚಾಟ್ – ಆತ್ಮಹತ್ಯೆ ಗೆ ಯತ್ನಿಸಿದ ಪ್ರಥಮ್

Public TV
1 Min Read

– ಸ್ನೇಹಿತನ ಜೊತೆ ರಸ್ತೆಯಲ್ಲೇ ಬಡಿದಾಟ?

ಬೆಂಗಳೂರು: ಬಿಗ್‍ಬಾಸ್ ಖ್ಯಾತಿಯ ಪ್ರಥಮ್ ಮತ್ತು ಅವರ ಸ್ನೇಹಿತ ಲೋಕಲ್ ಲೋಕಿ ರಸ್ತೆಯಲ್ಲಿಯೇ ಬಡಿದಾಡಿಕೊಂಡಿದ್ದಾರೆ.

ಪ್ರಥಮ್ ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನು ರೈತರಿಗೆ ನೀಡಿಲ್ಲ. ಕೇಳೋಕೆ ಹೋದವರಿಗೆಲ್ಲಾ ಬಾಯಿಗೆ ಬಂದಂತೆ ಬೈಯ್ತಾನೆ ಅಂತ ಫೇಸ್‍ಬುಕ್‍ನಲ್ಲಿ ಲೋಕಿ ಪೋಸ್ಟ್ ಮಾಡಿದ್ದರು. ಈ ವಿಷಯದ ಕುರಿತಾಗಿ ಪ್ರಥಮ್ ಮತ್ತು ಲೋಕಿ ನಡುವೆ ವೈಮನಸ್ಸು ಉಂಟಾಗಿತ್ತು.

ಮಂಗಳವಾರ ರಾತ್ರಿ ಯಾವುದೋ ವಿಚಾರ ಮಾತನಾಡ್ಬೇಕು ಅಂತ ಕುರುಬರಹಳ್ಳಿಯ ಬಳಿ ನನ್ನನ್ನು ಪ್ರಥಮ್ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಲೋಕಿ ಆರೋಪ ಮಾಡಿದ್ದಾರೆ. ರಾತ್ರಿ ಸುಮಾರು 10:30 ರ ಸಮಯದಲ್ಲಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ.

ರಾತ್ರಿ ನಡೆದ ಗಲಾಟೆಯ ನಂತರ ಪ್ರಥಮ್ ತಮ್ಮ ಮನೆಗೆ ಬಂದು ಬಿಗ್‍ಬಾಸ್ ಪ್ರಶಸ್ತಿ ಪಡೆಯುವ ದಿನ ಧರಿಸಿದ್ದ ಬಟ್ಟೆಯನ್ನು ಧರಿಸಿ ಫೇಸ್‍ಬುಕ್‍ನಲ್ಲಿ 20 ನಿಮಿಷ ಲೈವ್ ಚಾಟ್ ಮಾಡಿದ್ದಾರೆ. ಎಲ್ಲರಿಗೂ ಒಳ್ಳೇದಾಗ್ಲಿ. ನನಗೆ ತುಂಬಾ ಡಿಸ್ಟರ್ಬ್ ಮಾಡ್ತಿದ್ದಾರೆ. ನೆಮ್ಮದಿಯಾಗಿ ಬದುಕೋಕೆ ಬಿಡ್ತಿಲ್ಲ, ನನ್ನ ಕೆಲಸವನ್ನ ಕೆಟ್ಟದಾಗಿ ತೋರಿಸ್ತಿದ್ದಾರೆ. ಇನ್ನು ಮುಂದೆ ಯಾರಿಗೂ ಬೇಸರ ಮಾಡೋದಿಲ್ಲ. ಈಗಾಗಲೇ ನಾನು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದೇನೆ. ಇದು ನನ್ನ ಕೊನೆಯ ಫೇಸ್‍ಬುಕ್ ಲೈವ್ ಚಾಟ್ ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.

ಪ್ರಥಮ್ ನಿಜವಾಗ್ಲೂ ಲೋಕಿ ಮೇಲೆ ಹಲ್ಲೆ ಮಾಡಿದ್ದಾರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಲೋಕಿ ಪ್ರಥಮ್ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Olle Hudga Pratham 发布于 2017年4月4日

 

Share This Article
Leave a Comment

Leave a Reply

Your email address will not be published. Required fields are marked *