ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಚಿತ್ರಕ್ಕೆ ತನಿಷಾ ಕುಪ್ಪಂಡ ನಿರ್ಮಾಪಕಿ

Public TV
1 Min Read

ನ್ನಡ ಬಿಗ್ ಬಾಸ್ (Big Boss) ಸೀಸನ್ 10 ವಿನ್ನರ್ ಕಾರ್ತಿಕ್ (Karthik), ದೊಡ್ಮನೆಯಿಂದ ಬಂದ ನಂತರ ಹಲವಾರು ಕಥೆಗಳನ್ನು ಕೇಳಿದ್ದಾರಂತೆ. ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ಸ್ವಲ್ಪ ಸಮಯ ತಗೆದುಕೊಂಡು ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ. ಈ ನಡುವೆ ಬಿಗ್ ಬಾಸ್ ಸ್ಪರ್ಧಿ ತನಿಷಾ (Tanisha Kuppanda) ಬ್ಯಾನರ್ ನಲ್ಲಿ ಕಾರ್ತಿಕ್ ನಟಿಸಲಿದ್ದಾರಂತೆ.

ಎರಡು ದಿನಗಳ ಹಿಂದೆಯಷ್ಟೇ ತನಿಷಾ ಮತ್ತು ಕಾರ್ತಿಕ್ ಸಿನಿಮಾ (Cinema) ಮಾಡುವ ಕುರಿತಂತೆ ಮಾತನಾಡಿದ್ದಾರೆ. ಈ ಕುರಿತಂತೆ ಸ್ವತಃ ತನಿಷಾ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಮ್ಮದೇ ಬ್ಯಾನರ್ ನಲ್ಲಿ ಪುಟ್ಟ ಪ್ರಾಜೆಕ್ಟ್ ವೊಂದನ್ನು ಮಾಡಲು ಹೊರಟ್ಟಿದ್ದೇನೆ. ಕಾರ್ತಿಕ್ ಅವರ ಕಾಲ್ ಶೀಟ್ ಕೇಳಿದ್ದೇವೆ ಎಂದಿದ್ದಾರೆ.

ಸಿನಿಮಾ ಯಾವುದು, ಏನು ಎನ್ನುವುದರ ಕುರಿತು ತನಿಷಾ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಕಾರ್ತಿಕ್ ಅವರು ಬಿಡುವು ಮಾಡಿಕೊಂಡು, ಕಥೆ ಕೇಳಬೇಕು ಎಂದಷ್ಟೇ ಹೇಳಿದ್ದಾರೆ. ಬಿಗ್ ಬಾಸ್ ಮುಗಿದ ನಂತರ ಬಹುತೇಕ ಸ್ಪರ್ಧಿಗಳು ಕಾರ್ಯಕ್ರಮಗಳಲ್ಲಿ ಬಿಜಿ ಆಗಿದ್ದಾರೆ. ಅದರಂತೆ ಕಾರ್ತಿಕ್ ಮತ್ತು ತನಿಷಾ ಒಟ್ಟಾಗಿಯೂ ಕಾರ್ಯಕ್ರಮಗಳನ್ನು ಅಟೆಂಡ್ ಮಾಡುತ್ತಿದ್ದಾರೆ.

 

ಕಾರ್ತಿಕ್ ಈ ಸೀಸನ್ ನಲ್ಲಿ ವಿನ್ ಆದರೆ, ತನಿಷಾ ಕುಪ್ಪಂಡ ಬೆಂಕಿ ಅಂತಾನೇ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಜೋಡಿ ತೆರೆಯ ಮೇಲೆ ಬರಲಿ ಎನ್ನುವುದು ಹಲವರ ಆಸೆ ಕೂಡ ಇದೆ.

Share This Article