ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ರಿ, ನಿಮ್ಮ ಋಣ ಮರೆಯೋಕಾಗಲ್ಲ – ಸಿಜೆ ರಾಯ್ ನೆನೆದು ಹನುಮಂತು ಭಾವುಕ

1 Min Read

ಬೆಂಗಳೂರು: ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಋಣ ಯಾವತ್ತೂ ಮರೆಯೋಕಾಗಲ್ಲ ಎಂದು ಕಾನ್ಫಿಡೆಂಟ್ ಗ್ರೂಪ್ (Confident Group) ಮಾಲೀಕ ಸಿಜೆ ರಾಯ್  (CJ Roy) ನೆನೆದು ಬಿಗ್‌ಬಾಸ್ 11ರ (Bigg Boss 11) ವಿನ್ನರ್ ಹನುಮಂತು ಭಾವುಕರಾಗಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಅಂದು ಸರಿಗಮಪ ಸೀಸನ್ 12ರಲ್ಲಿ ನಾನು ರನ್ನರ್ ಅಪ್ ಆಗಿದ್ದಾಗ, ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್‌ಬಾಸ್ ಸೀಸನ್ 11ರಲ್ಲಿ ನಾನು ಗೆದ್ದಾಗ ನನಗೆ ಪ್ರೀತಿಯಿಂದ ಹಣ ಕೊಡುವುದರ ಮೂಲಕ ಸಂಭ್ರಮಿಸಿದ್ದೀರಿ. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್. ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿ.ಜೆ ರಾಯ್ ಕಟ್ಟಿದ್ದು 8,500 ಕೋಟಿಯ ಸಾಮ್ರಾಜ್ಯ – ಬಿಲಿಯನೇರ್ ಆಗಿದ್ದೇ ರೋಚಕ!

ಸಿಜೆ ರಾಯ್ ಅವರು ಸರಿಗಮಪ ಸೀಸನ್ 12ರಲ್ಲಿ ಹನುಮಂತು ರನ್ನರ್ ಅಪ್ ಆಗಿದ್ದಾಗ ಬಹುಮಾನದ ಹಣ ನೀಡಿದ್ದರು. ಬಳಿಕ ಬಿಗ್‌ಬಾಸ್ ಸೀಸನ್ 11ರಲ್ಲಿಯೂ ಗೆದ್ದಾಗ ಕೂಡ ಅವರೇ ಗೆದ್ದ ಹಣವನ್ನು ನೀ ಡಿದ್ದರು. ಹನುಮಂತು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಣವನ್ನು ನೀಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶುಕ್ರವಾರ (ಜ.31) ಮಧ್ಯಾಹ್ನ ಸುಮಾರಿಗೆ ಐಟಿ ದಾಳಿ ವೇಳೆ ಸಿಜೆ ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದನ್ನೂ ಓದಿ: ಸಿನಿ ರಂಗದೊಂದಿಗೆ ಸಿಜೆ ರಾಯ್‌ ನಂಟು ಅಪಾರ – ಕನ್ನಡ, ಮಲಯಾಳಂ ನಲ್ಲಿ 11 ಸಿನಿಮಾ ನಿರ್ಮಾಣ

Share This Article