ಒಟಿಟಿಯಲ್ಲಿ ಕೇವಲ ಸಲಿಂಗಕಾಮವೇ ತುಂಬಿಕೊಂಡಿದೆ ಎಂದ ಅಮೀಷಾಗೆ ಉರ್ಫಿ ಕ್ಲಾಸ್

Public TV
2 Min Read

ಬಾಲಿವುಡ್ (Bollywood) ಬ್ಯೂಟಿ ಅಮೀಶಾ ಪಟೇಲ್ ಅವರು ‘ಗದರ್ 2’ (Gadar 2) ಸಿನಿಮಾ ಮೂಲಕ ಮತ್ತೆ ಸದ್ದು ಮಾಡ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಅಮೀಶಾ, ಸಿನಿಮಾಗಿಂತ ಬೋಲ್ಡ್ ಫೋಟೊಗಳ ವಿಷ್ಯವಾಗಿಯೇ ಸುದ್ದಿಯಲ್ಲಿರುತ್ತಾರೆ. ಈಗ ಒಟಿಟಿಯಲ್ಲಿ ಸಲಿಂಗಕಾಮ ಮತ್ತು ವೆಬ್ ಸಿರೀಸ್‌ಗಳೇ ಹೆಚ್ಚಾಗಿದೆ ಎಂದು ನಟಿ ಗುಡುಗಿದ್ದಾರೆ. ಅಮೀಷಾ ಪಟೇಲ್ ಮಾತಿಗೆ ಬಿಗ್ ಬಾಸ್ (Bigg Boss) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಗರಂ ಆಗಿದ್ದಾರೆ. ಆ ನಟಿಗೆ ಉರ್ಫಿ ತಿರುಗೇಟು ನೀಡಿದ್ದಾರೆ.

ಹಿಂದಿ ಸಿನಿಮಾ ರಂಗದ ಫೇಮಸ್ ಜೋಡಿ ಸನ್ನಿ ಡಿಯೋಲ್ (Sunny Deol)-ಅಮೀಶಾ ಪಟೇಲ್ ಮತ್ತೆ ಒಟ್ಟಾಗಿ ನಟಿಸಿರುವ ‘ಗದರ್ 2’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರಚಾರಕ್ಕಾಗಿ ನಟಿ ಸಂದರ್ಶನದಲ್ಲಿ ಬ್ಯುಸಿಯಾಗಿದ್ದಾರೆ. ಒಟಿಟಿ ಬಗ್ಗೆ ಅಮೀಶಾ ಪಟೇಲ್ (Ameesha Patel) ಅವರು ಅಸಮಾಧಾನ ಹೊರಹಾಕಿದ್ದಾರೆ. ಈಗೀನ ಜನರೇಷನ್‌ ಸಿನಿಮಾ, ಒಟಿಟಿಯಲ್ಲಿ ಪ್ರಸಾರವಾಗುವ ಚಿತ್ರಗಳ ಬಗ್ಗೆ ಅಮೀಷಾ ರಿಯಾಕ್ಟ್‌ ಮಾಡಿದ್ದಾರೆ. ಈಗ ಜನರು ಶುದ್ಧವಾದ, ಒಳ್ಳೆಯ ಸಿನಿಮಾ ನೋಡಲು ಕಾಯ್ತಿದ್ದಾರೆ. ಆದರೆ ಅಜ್ಜಿ-ತಾತನ ಜೊತೆ ಮೊಮ್ಮಕ್ಕಳು ಕೂಡ ಕುಳಿತು ನೋಡುವಂತಹ ಸಿನಿಮಾಗಳನ್ನು ನಾವು ಇಂದು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಒಟಿಟಿಯಲ್ಲಿ ಮನೆಮಂದಿ ಕುಳಿತು ನೋಡುವ ಸಿನಿಮಾ ಸಿಗುತ್ತಿಲ್ಲ ಎಂದಿದ್ದಾರೆ.

ಒಟಿಟಿಯಲ್ಲಿ ಕೇವಲ ಸಲಿಂಗ ಕಾಮದ ವಿಷಯಗಳೇ ತುಂಬಿಕೊಂಡಿವೆ. ಅದನ್ನು ನೋಡುವಾಗ ಮಕ್ಕಳ ಕಣ್ಣುಗಳನ್ನು ಮುಚ್ಚಬೇಕಿದೆ ಅಥವಾ ಅವರು ಅಂಥದ್ದನ್ನು ನೋಡದ ರೀತಿಯಲ್ಲಿ ಟಿವಿಗೆ ಚೈಲ್ಡ್ ಲಾಕ್ ಹಾಕಬೇಕಿದೆ ಎಂದ ಅಮೀಷಾ ಹೇಳಿಕೆಗೆ ನಟಿ ಉರ್ಫಿ ಜಾವೇದ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಲಿಂಗ ಕಾಮ ಎಂದರೇನು ಮಕ್ಕಳನ್ನು ಅದರಿಂದ ದೂರ ಇರಿಸುತ್ತೀರಾ? ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ತಿಳುವಳಿಕೆ ಇಲ್ಲದೇ ಮಾತನಾಡುವ ಸೆಲೆಬ್ರಿಟಿಗಳನ್ನು ಕಂಡರೆ ನನಗೆ ಕಿರಿಕಿರಿ ಆಗುತ್ತದೆ. 25 ವರ್ಷಗಳಿಂದ ಅಮೀಷಾಗೆ ಕೆಲಸ ಸಿಗದ ಕಾರಣ ಅವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಉರ್ಫಿ ಜಾವೇದ್ ಅವರು ‘ಗದರ್ 2’ ನಟಿಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ಇದನ್ನೂ ಓದಿ:ಪುಷ್ಪ 2 ಚಿತ್ರದ ಐಟಂ ಸಾಂಗ್: ಊರ್ವಶಿ ರೌಟೇಲಾ ಬಂದ್ರು ದಾರಿ ಬಿಡಿ

‘ಕಹೋ ನಾ ಪ್ಯಾರ್ ಹೈʼ ನಾಯಕಿ ಅಮೀಷಾ ಪಟೇಲ್ ಇತ್ತೀಚಿಗೆ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಂಚಿಯ ಸಿವಿಲ್ ನ್ಯಾಯಾಲಯಕ್ಕೆ ಸೆರೆಂಡರ್ ಆಗಿದ್ದರು. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಸಹಾಯಕರೊಬ್ಬರೊಡನೆ ನ್ಯಾಯಾಲಯಕ್ಕೆ ಆಗಮಿಸಿದ ಅಮೀಷಾ ಪಟೇಲ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ನಟಿ ಅಮೀಷಾ ವಿರುದ್ಧ ರಾಂಚಿ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲೆಂದು ಅಮೀಷಾ ಪಟೇಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಉರ್ಫಿ ಜೊತೆಗಿನ ಜಟಾಪಟಿಯ ವಿಷ್ಯವಾಗಿ ಸದ್ದು ಮಾಡ್ತಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್