ಬೀದಿಯಲ್ಲಿ ಕುಡಿದು ತೂರಾಡಿದ ಉರ್ಫಿ ಜಾವೇದ್

Public TV
1 Min Read

ಬಾಲಿವುಡ್ ಬೆಡಗಿ ಉರ್ಫಿ ಜಾವೇದ್ (Urfi Javed) ಸದಾ ಒಂದಲ್ಲ ಒಂದು ಕಾಂಟ್ರವರ್ಸಿಯಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ನಟಿ ಫುಲ್ ಟೈಟಾಗಿ ಮುಂಬೈ ಬೀದಿಯಲ್ಲಿ ಕುಡಿದು ತೂರಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

View this post on Instagram

 

A post shared by Viral Bhayani (@viralbhayani)


ವಿಚಿತ್ರ ಡ್ರೆಸ್‌ಗಳಿಂದ ಸುದ್ದಿಯಾಗ್ತಿದ್ದ ಹಾಟ್ ಬ್ಯೂಟಿ ಉರ್ಫಿ ಇದೀಗ ಪಾರ್ಟಿ ಮುಗಿಸಿ ಬರುವಾಗ ನಶೆಯಲ್ಲಿ ನಡೆಯಲಾರದ ಪರಿಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಕಲರ್ ಶಾರ್ಟ್ ಡ್ರೆಸ್ ಧರಿಸಿರುವ ನಟಿ ಹೆಜ್ಜೆ ಇಡಲು ಸಾಧ್ಯವಾಗಿಲ್ಲ. ಪಕ್ಕದಲ್ಲಿದ್ದ ಗೆಳತಿಯತ ಮೈ ಮೇಲೆ ಭಾರ ಹಾಕಿ ಕಾರ್‌ವರೆಗೂ ನಡೆದು ಬರುತ್ತಾರೆ. ನಟಿಯ ಸ್ಥಿತಿ ನೋಡಿ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿವೆ.

ಅಂದಹಾಗೆ, ಇತ್ತೀಚೆಗೆ ತೆರೆಕಂಡ ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರ ‘ಲವ್ ಸೆಕ್ಸ್ ಔರ್ ಧೋಕಾ’ ಸೀಕ್ವೆಲ್‌ಗೆ ಉರ್ಫಿ ಜಾವೇದ್ ನಾಯಕಿಯಾಗಿ ನಟಿಸಿದರು. ಇಂದಿನ ಪೀಳಿಗೆಯ ಅನುಭವಗಳ ಮೇಲೆ ಈ ಸಿನಿಮಾದ ಕಥೆ ಆಧರಿಸಿ ಸಿನಿಮಾ ಮಾಡಲಾಗಿತ್ತು.

ಈ ಚಿತ್ರಕ್ಕೆ ಉರ್ಫಿನೇ ಸೂಕ್ತ ನಟಿ ಎಂದು ಚಿತ್ರತಂಡ ಆಯ್ಕೆ ಮಾಡಿತ್ತು. ಈ ಚಿತ್ರಕ್ಕೆ ದಿಬಾಕರ್ ಬ್ಯಾನರ್ಜಿ ಆ್ಯಕ್ಷನ್ ಕಟ್ ಹೇಳಿದ್ದರು. ರಿಲೀಸ್ ಆದ ಉರ್ಫಿ ಸಿನಿಮಾ ನೋಡಿ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ಪ್ರಭಾಸ್ ಮದುವೆ ಬಗ್ಗೆ ಸೂಚನೆ ಕೊಟ್ಟ ದೊಡ್ಡಮ್ಮ

ಉರ್ಫಿ ಜಾವೇದ್ ಅವರು ‘ಬೇಪನ್ಹಾ’, ‘ಡಿಯಾನ್’, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’, ‘ಬಡೆ ಭಯ್ಯಾ’, ‘ಐ ಮೇರೆ ಹಮ್ಸಾಫರ್’, ‘ಚಂದ್ರ ನಂದಿನಿ’ ಮತ್ತು ‘ಮೇರಿ ದುರ್ಗಾ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article