ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ

Public TV
1 Min Read

‘ಬಿಗ್ ಬಾಸ್ ಕನ್ನಡ ಸೀಸನ್ 10’ರ (Bigg Boss Kannada 10) ಸ್ಪರ್ಧಿ ತುಕಾಲಿ ಸಂತೋಷ್ (Tukali Santhosh) ಅವರ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ. ಹೊಸ ಕಾರನ್ನು ಖರೀದಿಸಬೇಕೆಂಬುದು ತುಕಾಲಿ ಸಂತೋಷ್ ಕನಸಾಗಿತ್ತು. ಇದೀಗ ಅದು ನೆರವೇರಿದೆ. ಹೊಸ ಕಾರಿನ ವಿಡಿಯೋವನ್ನು ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಶೋ ಮುಗಿದ್ಮೇಲೆ ಹಲವರ ಬದುಕು ಬದಲಾಗಿದೆ. ತುಕಾಲಿ ಸಂತೋಷ್ ಲೈಫ್‌ನಲ್ಲಿಯೂ ಕೂಡ ಹೊಸ ಜರ್ನಿ ಶುರುವಾಗಿದೆ. ರಿಯಾಲಿಟಿ ಶೋ ಮಧ್ಯೆ ಸಿನಿಮಾ ಅವಕಾಶಗಳು ಕೂಡ ಅರಸಿ ಬರುತ್ತಿದೆ. ಇದನ್ನೂ ಓದಿ:ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

ಬಿಗ್ ಬಾಸ್ ಫಿನಾಲೆವರೆಗೆ ಇದ್ದ ಅವರು ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ದೊಡ್ಮನೆಯಿಂದ ಬಂದ ಸಂಭಾವನೆಯಿಂದ ಅವರು ಕಾರು ಖರೀದಿ ಮಾಡಿದ್ದಾರೆ. ಕಿಯಾ ಕಂಪನಿಯ ಕಾರನ್ನು ಅವರು ಖರೀದಿ ಮಾಡಿದ್ದಾರೆ. ಈ ವೇಳೆ, ಅವರ ಪತ್ನಿ ಮಾನಸಾ ಕೂಡ ಇದ್ದರು.

‘ಕಂಡ ಕನಸು ನನಸಾದ ದಿನ’ ಎಂದು ಅಡಿಬರಹ ನೀಡಿ, ತುಕಾಲಿ ಸಂತು ಕಾರು ಖರೀದಿಸುತ್ತಿರುವ ವಿಡಿಯೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ನಟನ ಯಶಸ್ಸಿಗೆ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಸಿನಿತಾರೆಯರ ದಂಡು

ಕಾಮಿಡಿ ಕಿಲಾಡಿಗಳು 3, ಜೋಡಿ ನಂಬರ್ ಒನ್, ಗಿಚ್ಚಿ ಗಿಲಿ ಗಿಲಿ 3 (Gichi gili gili 3) ಸೇರಿದಂತೆ ಹಲವು ಶೋಗಳ ಮೂಲಕ ತುಕಾಲಿ ಸಂತೋಷ್ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಶೋ ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿದೆ. ಅದರಲ್ಲೂ ವರ್ತೂರು ಸಂತೋಷ್ ಜೊತೆಗಿನ ಒಡನಾಟದ ವಿಚಾರವಾಗಿ ತುಕಾಲಿ ಸಂತು ಹೈಲೆಟ್ ಆಗಿದ್ದರು.

Share This Article