ಕರಣ್ ಜೊತೆಗಿನ ತೇಜಸ್ವಿ ಪ್ರಕಾಶ್ ಬ್ರೇಕಪ್ ಸುದ್ದಿಗೆ ಕೊನೆಗೂ ಸಿಕ್ತು ಉತ್ತರ

Public TV
1 Min Read

ಬಿಗ್ ಬಾಸ್ ಹಿಂದಿ ಸೀಸನ್ 15ರ (Bigg Boss Hindi 15) ವಿನ್ನರ್ ತೇಜಸ್ವಿ ಪ್ರಕಾಶ್ (Tejasswi Prakash) ಮತ್ತು ಕರಣ್ ಕುಂದ್ರಾ (Karan Kundrra) ಬ್ರೇಕಪ್ ಸುದ್ದಿಗೆ ಇದೀಗ ಉತ್ತರ ಸಿಕ್ಕಿದೆ. ಸಾಕಷ್ಟು ದಿನಗಳಿಂದ ಇಬ್ಬರ ಬ್ರೇಕಪ್ ಬಗ್ಗೆ ಗುಸು ಗುಸು ಶುರುವಾಗಿತ್ತು. ಈ ವಿಚಾರಕ್ಕೆ ನಟಿ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದಾಯ್ತು ಒಂದು ಮೊಟ್ಟೆಯ ಕಥೆ ಟೀಮ್- ‘ರೂಪಾಂತರ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ

2021ರಲ್ಲಿ ಬಿಗ್ ಬಾಸ್ ಶೋನಲ್ಲಿ ಪರಿಚಿತರಾದ ಕರಣ್ ಮತ್ತು ತೇಜಸ್ವಿ ಕಳೆದ 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ. ಇಬ್ಬರ ನಡುವೆ ಸಂಬಂಧ ಸರಿಯಿಲ್ಲ ಎಂದೆಲ್ಲಾ ಸುದ್ದಿ ಹರಿದಾಡಿತ್ತು. ಈಗ ಆತ್ಮೀಯವಾಗಿರುವ ಫೋಟೋ ಶೇರ್ ಮಾಡಿ ಬ್ರೇಕಪ್ ವದಂತಿಗೆ ತೆರೆ ಎಳೆದಿದ್ದಾರೆ.

 

View this post on Instagram

 

A post shared by Tejasswi Prakash (@tejasswiprakash)

ಕರಣ್ ಮತ್ತು ತೇಜಸ್ವಿ ಲಂಡನ್‌ಗೆ ಹಾರಿದ್ದಾರೆ. ಸುಂದರ ತಾಣಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಹಂಚಿಕೊಂಡು ಬೇಸರದಲ್ಲಿದ್ದ ಫ್ಯಾನ್ಸ್‌ಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ನಾವಿಬ್ಬರೂ ಜೊತೆಯಾಗಿದ್ದೇವೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಇದನ್ನು ನೋಡಿ ಫ್ಯಾನ್ಸ್‌ ನಿರಳವಾಗಿದ್ದಾರೆ.

ಬಿಗ್ ಬಾಸ್ 15ರ ಬಳಿಕ ‘ನಾಗಿನ್ 6’ನಲ್ಲಿ ನಾಯಕಿಯಾಗಿ ತೇಜಸ್ವಿ ನಟಿಸಿದರು. ಬಳಿಕ ಮರಾಠಿ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಿದರು. ಕರಣ್ ಕುಂದ್ರಾ ಹಲವು ಶೋಗಳಿಗೆ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ.

Share This Article