‘ನಾನು ನಿನ್ನ ಪ್ರೀತಿಸುವೆ’ ಎಂದ ನಟಿ- ತನಿಷಾ ಪ್ರೀತಿಯಲ್ಲಿ ಬಿದ್ದಿರೋದು ಪಕ್ಕಾ ಎಂದ ಫ್ಯಾನ್ಸ್

Public TV
1 Min Read

‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿ, ತನಿಷಾ ಕುಪ್ಪಂಡ (Tanisha Kuppanda) ಅವರು ಸಿನಿಮಾ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಇದರ ನಡುವೆ ‘ನಾನು ನಿನ್ನ ಪ್ರೀತಿಸುವೆ’ ಎಂದು ನಟಿ ರೀಲ್ಸ್‌ ಮಾಡಿ ಗಮನ ಸೆಳೆದಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ನಟಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಪಕ್ಕಾ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ತನಿಷಾ ಕುಪ್ಪಂಡ ಹೊಸ ರೀಲ್ಸ್‌ವೊಂದನ್ನು ಹಂಚಿಕೊಂಡಿದ್ದಾರೆ. ನನ್ನಂತ ಹುಡುಗಿ ಸಿಗೋಕೆ ಪುಣ್ಯ ಮಾಡಿರಬೇಕು. ನಾನು ನಿನ್ನ ಪ್ರೀತಿಸುವೆ ಹಾಡಿಗೆ ಮಸ್ತ್ ಸ್ಟೆಪ್ಸ್ ಹಾಕಿ ನಾಚಿ ನೀರಾಗಿದ್ದಾರೆ. ರೀಲ್ಸ್ ನೋಡಿದ ಫ್ಯಾನ್ಸ್ ತನಿಷಾ ಮೆಚ್ಚಿರೋ ಆ ಹುಡುಗ ಯಾರು ಎಂದೆಲ್ಲಾ ಚರ್ಚಿಸುತ್ತಿದ್ದಾರೆ. ಇದನ್ನೂ ಓದಿ:ಅಪ್ಪುಗಾಗಿ ‘ನೀನೇ ರಾಜಕುಮಾರ’ ಹಾಡನ್ನು ಸ್ಟೈಲಿಶ್ ಆಗಿ ಹಾಡಿದ ವಿದೇಶಿ ಮಹಿಳೆ

 

View this post on Instagram

 

A post shared by Tanisha Kuppanda (@tanishakuppanda)

ಇನ್ನೂ ‘ಬಿಗ್ ಬಾಸ್’ ಶೋ ಬಳಿಕ ತನಿಷಾಗೆ ಬೇಡಿಕೆ ಹೆಚ್ಚಾಗಿದೆ. ಹೊಸ ಪ್ರಾಜೆಕ್ಟ್‌ಗಳಿಗೆ ಸಿನಿಮಾ ಆಫರ್ಸ್‌ ಅರಸಿ ಬರುತ್ತಿವೆ. ಸದ್ಯ ಅವರು ಕೋಮಲ್‌ಗೆ ಜೋಡಿಯಾಗಿ ‘ಕೋಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತನಿಷಾ ಕುಪ್ಪಂಡ ಅವರೇ ನಿರ್ಮಾಣ ಮಾಡುತ್ತಿದ್ದಾರೆ.

ತನಿಷಾ ನಿರ್ಮಾಣದ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್, ನಮ್ರತಾ ಗೌಡ, ಶಿಶಿರ್ ಶಾಸ್ತ್ರಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಅವರ ಪಾತ್ರ ಹೇಗಿರಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ.

Share This Article