Bigg Boss: ಅನಾರೋಗ್ಯದ ಸಮಸ್ಯೆ, ದೊಡ್ಮನೆ ಆಟದಿಂದ ಹೊರಬಂದ ಸ್ಪರ್ಧಿ

By
1 Min Read

ಬಿಗ್ ಬಾಸ್ ಶೋ ತಮಿಳಿನಲ್ಲೂ (Bigg Boss Tamil 7) ಪ್ರಸಾರವಾಗುತ್ತಿದೆ. ಕಳೆದ ವಾರ ಸೀಸನ್‌ 7 ಬಿಗ್‌ ಬಾಸ್‌ಗೆ ಚಾಲನೆ ಸಿಕ್ಕಿದೆ. ಹೀಗಿರುವಾಗ ಎದೆ ನೋವಿನ ಸಮಸ್ಯೆಯಿಂದ ಶೋ ಅರ್ಧಕ್ಕೆ ಬಿಟ್ಟು ಬಾವಾ ಚೆಲ್ಲದುರೈ ಹೊರ ಬಂದಿದ್ದಾರೆ. ಕಮಲ್ ಹಾಸನ್ (Kamal Haasan) ನಿರೂಪಣೆಯ ಸೀಸನ್ 7ರ ಬಿಗ್ ಬಾಸ್‌ನಿಂದ ರೈಟರ್ ಬಾವಾ ಅವರು ಹೊರನಡೆದಿದ್ದಾರೆ.

ತಮಿಳು ಬಿಗ್ ಬಾಸ್‌ ಶೋಗೆ ಚಾಲನೆ ನೀಡಿ, ಒಂದು ವಾರ ಕಳೆದಿದೆ. ಮೊದಲ ವಾರದ ಎಲಿಮಿನೇಟ್ ಆಗಿ ಅನನ್ಯಾ ರಾವ್ ಹೊರ ಬಂದಿದ್ದರು. ಈ ಬೆನ್ನಲ್ಲೇ ಬರಹಗಾರ ಬಾವಾ ಚೆಲ್ಲದುರೈ ಶೋನಿಂದ ಹೊರನಡೆದಿದ್ದಾರೆ. ಬಾವಾ ಕಳೆದ ವಾರ ನಾಮಿನೇಟ್ ಆಗಿದ್ದರು. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಯಲ್ಲಿ ತುಕಾಲಿ ಸಂತುಗೆ ಬೇಸರ ಮಾಡಿದ ಇಶಾನಿ

ಮಾನಸಿಕ ಆರೋಗ್ಯ, ದೈಹಿಕ ಸಮಸ್ಯೆಯಿಂದ ನನಗೆ ಆಡಲು ಆಗುತ್ತಿಲ್ಲ. ಶೋನಿಂದ ಹೊರ ಹೋಗಲು ಅನುಮತಿ ನೀಡಿ ಎಂದು ಕನ್ಫೆಷನ್ ರೂಮ್‌ನಲ್ಲಿ ಬಾವಾ ಅವರು ಬಿಗ್ ಬಾಸ್‌ಗೆ ಮನವಿ ಮಾಡಿದ್ದರು. ಅದರಂತೆ ಅವರು ಶೋನಿಂದ ಎಕ್ಸಿಟ್ ಆಗಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್