ಸುದೀಪ್ ಹುಟ್ಟುಹಬ್ಬಕ್ಕೆ `ಬಿಗ್’ ಸರ್‌ಪ್ರೈಸ್

Public TV
1 Min Read

ಸೆ.2ರಂದು ಸುದೀಪ್ (Kiccha Sudeep) ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆಯೇ ಅಭಿಮಾನಿಗಳಿಗೆ ಸಿಗೋದಾಗಿ ತಿಳಿಸಿದ್ದಾರೆ.

ಕಳೆದ ಬಾರಿ ಜಯನಗರ ಮೈದಾನದಲ್ಲಿ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು ಸುದೀಪ್. ಈ ಬಾರಿ ಸ್ಥಳ ತಿಳಿಸಿಲ್ಲ. ಆದರೆ, ಸೆ.2ನೇ ತಾರೀಖು ಮನೆ ಮುಂದೆ ಅಭಿಮಾನಿಗಳು ಬರಬೇಡಿ ಅಂತ ಹೇಳಿದ್ದು ನೋಡಿದರೆ, ಮನೆ ಮುಂದೆಯಂತೂ ಸಂಭ್ರಮ ಇರುವುದಿಲ್ಲ. ಇದನ್ನೂ ಓದಿ: ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಫರ‍್ಹಾ ಖಾನ್

ಸುದೀಪ್ ಇದೀಗ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಬಿಲ್ಲ ರಂಗ ಬಾಷಾ ಚಿತ್ರದಲ್ಲಿ ನಟಿಸುತ್ತಿದ್ದರೆ, ಮ್ಯಾಕ್ಸ್ ನಿರ್ದೇಶಕರ ಮತ್ತೊಂದು ಚಿತ್ರದಲ್ಲಿ ಕಿಚ್ಚ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳ ಒಂದೊಂದು ಹಂತದ ಚಿತ್ರೀಕರಣ ಮುಗಿದಿದೆ. ಆ ಸಿನಿಮಾಗಳ ಅಪ್‌ಡೇಟ್ ಸಿಗಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಬಿಗ್‌ ಬಾಸ್ ಅಪ್‌ಡೇಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಕಿಚ್ಚನ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲೆಂದೇ ಬಿಗ್ ಬಾಸ್ ಪ್ರೋಮೋ ರೆಡಿ ಮಾಡಲಾಗಿದೆಯಂತೆ. ಈ ಬಾರಿಯ ಪ್ರೋಮೋದಲ್ಲಿ ಹಲವು ವಿಶೇಷತೆಗಳು ಇರಲಿವೆಯಂತೆ. ಬಿಗ್ ಬಾಸ್ ಶುರುವಾಗುವ ದಿನಾಂಕವೂ ಗೊತ್ತಾಗಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ ಕಿಚ್ಚನ ಲುಕ್ ಕೂಡ ರಿವೀಲ್ ಆಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ದರ್ಶನ್ ಜೊತೆಗಿನ ಫೋಟೋ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ

Share This Article