Bigg Boss: ಮುಂದಿನ ವಾರ ಒಳ್ಳೆ ಹುಡುಗ ಪ್ರಥಮ್ ಮದುವೆ

Public TV
1 Min Read

ಬಿಗ್ ಬಾಸ್ ಕನ್ನಡ ಸೀಸನ್ 4ರ (Bigg Boss Kannada 4) ವಿನ್ನರ್ ಪ್ರಥಮ್ (Pratham) ಅವರು ತಮ್ಮ ಮದುವೆಯ ಬಗ್ಗೆ ಅಪ್‌ಡೇಟ್‌ವೊಂದನ್ನ ಹಂಚಿಕೊಂಡಿದ್ದಾರೆ. ಮದುವೆ (Wedding) ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಅಪಘಾತ ಪ್ರಕರಣ: ನಟ ನಾಗಭೂಷಣ್ ವಿರುದ್ಧ 70 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಮುಂದಿನ ವಾರ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೇಸೆಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕುಟುಂಬದವರು ಇಷ್ಟಪಟ್ಟ ಹುಡುಗಿ ಮಂಡ್ಯದ ಭಾನುಶ್ರೀ ಜೊತೆ ಪ್ರಥಮ್ ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ.

ಇನ್ನೂ ಕಳೆದ ವರ್ಷ ‘ನಟ ಭಯಂಕರ’, ‘ಎಂಎಲ್‌ಎ’, ‘ದೇವರಂಥ ಮನುಷ್ಯ’ ಎಂಬ ಸಿನಿಮಾಗಳಲ್ಲಿ ಪ್ರಥಮ್ ನಟಿಸಿದ್ದರು.

Share This Article