ಬಿಗ್‌ ಬಾಸ್‌ ಮನೆಯಿಂದ ಜಾನ್ವಿ ಔಟ್‌

1 Min Read

ಬಿಗ್‌ ಬಾಸ್‌ (Bigg Boss) ಮನೆಯಿಂದ ಜಾನ್ವಿ (Jhanvi) ಎಲಿಮಿನೇಟ್‌ ಆಗಿದ್ದಾರೆ. ಅಶ್ವಿನಿ ಗೌಡ (Ashwini Gowda) ಜೊತೆ ಉತ್ತಮ ಸ್ನೇಹ ಹೊಂದಿದ್ದ ಜಾನ್ವಿ  ಈ ವಾರ ಮನೆಯಿಂದ ಹೊರ ಬಂದಿದ್ದಾರೆ.

ಕೊನೆಯಲ್ಲಿ ಧ್ರುವಂತ್‌, ಮಾಳು, ಜಾನ್ವಿ ಎಲಿಮಿನೇಷನ್‌ ಲಿಸ್ಟ್‌ನಲ್ಲಿ ಇದ್ದರು.  ಆರಂಭದಲ್ಲಿ ಧ್ರುವಂತ್‌ ನಂತರ ಮಾಳು ಸೇವ್‌ ಆಗಿದ್ದರಿಂದ ಜಾನ್ವಿ ಮನೆಯಿಂದ ಔಟ್‌ ಆಗಿದ್ದಾರೆ.

ಈ ಹಿಂದೆ ಹಲವು ಬಾರಿ ಈ ಬಾರಿ ಬಿಗ್‌ ಬಾಸ್‌ ಗೆಲ್ಲಬೇಕು ಎಂದು ಸ್ಪರ್ಧಿಗಳ ಜೊತೆ ಜಾನ್ವಿ ಹೇಳುತ್ತಿದ್ದರು. ಆರಂಭದಲ್ಲಿ ಅಶ್ವಿನಿ ಗೌಡ ಜೊತೆ ಸೇರಿ ಜಾನ್ವಿ ಗೆಜ್ಜೆ ಶಬ್ಧ ಮಾಡಿದ್ದರು. ನಂತರ ಗೆಜ್ಜೆ ಧ್ವನಿ ಮಾಡಿದ್ದು ರಕ್ಷಿತಾ ಎಂದು ಮನೆಯವರನ್ನು ನಂಬಿಸಲು ಮುಂದಾಗಿದ್ದರು. ಈ ವಿಚಾರ ದೊಡ್ಡ ಸದ್ದು ಮಾಡಿತ್ತು.

ಬಳಿಕ ಸ್ಪಂದನಾ ವಾಹಿನಿ ಕಡೆಯಿಂದ ಬಂದಿದ್ದಾರೆ ಎಂದು ಹೇಳಿದ್ದಕ್ಕೆ ಸುದೀಪ್‌ ಕ್ಲಾಸ್‌ ತಗೆದುಕೊಂಡಿದ್ದರು. ನಂತರ ಡ್ರೆಸ್‌ ಚೇಂಜ್‌ ಮಾಡುವ ಕೊಠಡಿಯಲ್ಲಿ ಪಿಸು ಮಾತು ಆಡಿದ್ದಕ್ಕೆ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಂಡಿದ್ದರು. ಸುದೀಪ್‌ ಅವರು ಎಚ್ಚರಿಕೆ ನೀಡಿದ ಬಳಿಕವೂ ಮತ್ತೆ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಾತನಾಡಿದ್ದಕ್ಕೆ ಜಾನ್ವಿ ಮತ್ತು ಅಶ್ವಿನಿ ಗೌಡ ಮನೆಯಿಂದ ಹೊರಹೋಗಲು ಕಳೆದ ವಾರ ನೇರವಾಗಿ ನಾಮಿನೇಟ್‌ ಆಗಿದ್ದರೂ ಸೇವ್‌ ಆಗಿದ್ದರು.

ಈ ಹಿಂದೆ ನಾಮಿನೇಟ್‌ ಆಗಿದ್ದರೂ ವೀಕ್ಷಕರ ವೋಟ್‌ನಿಂದ ಜಾನ್ವಿ ಸೇವ್‌ ಆಗುತ್ತಿದ್ದರು. ಆದರೆ ಈ ಬಾರಿ ವೀಕ್ಷಕರಿಂದ ಹೆಚ್ಚಿನ ವೋಟ್‌ ಪಡೆಯದ ಕಾರಣ ಮನೆಯಿಂದ ಔಟ್‌ ಆಗಿದ್ದಾರೆ.

Share This Article