ಸಂಗೀತಾ ಬರ್ತ್‌ಡೇಗೆ ವಿಶೇಷ ಉಡುಗೊರೆ ನೀಡಿದ ಡ್ರೋನ್‌ ಪ್ರತಾಪ್

Public TV
1 Min Read

‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ಸಂಗೀತಾ ಶೃಂಗೇರಿ (Sangeetha Sringeri) ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.  ಬರ್ತ್‌ಡೇ ಸಂಭ್ರಮದಲ್ಲಿ ಡ್ರೋನ್ ಪ್ರತಾಪ್, ನೀತು ಸೇರಿದಂತೆ ಅನೇಕರು ಭಾಗಿಯಾಗಿ ಸಂಗೀತಾಗೆ ವಿಶ್ ಮಾಡಿದ್ದಾರೆ.‌ ಅಕ್ಕ ಸಂಗೀತಾಗೆ ಪ್ರತಾಪ್‌ ವಿಶೇಷ ಉಡುಗೊರೆ ಕೂಡ ನೀಡಿದ್ದಾರೆ. ಸದ್ಯ ನಟಿಯ ಬರ್ತ್‌ಡೇ ಸೆಲೆಬ್ರೇಶನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ದುನಿಯಾ ಸೂರಿ ನಿರ್ದೇಶನದ ‘ಕಾಗೆ ಬಂಗಾರ’ ಚಿತ್ರಕ್ಕೆ ಮುಹೂರ್ತ ಫಿಕ್ಸ್

ಇದೀಗ ಡ್ರೋನ್ ಪ್ರತಾಪ್ (Drone Prathap) ಪ್ರೀತಿಯ ಅಕ್ಕ ಸಂಗೀತಾ ಶೃಂಗೇರಿ ಮನೆಗೆ ಭೇಟಿ ಕೊಟ್ಟಿದ್ದಾರೆ. ಇವರ ಜೊತೆಗೆ ನೀತು (Neethu Vanajakshi) ಕೂಡ ಭಾಗಿಯಾಗಿದ್ದರು. ಹುಟ್ಟುಹಬ್ಬದ ನಿಮಿತ್ತ ಪ್ರತಾಪ್ ಮತ್ತು ನೀತು ಅವರು ಕೇಕ್ ತೆಗೆದುಕೊಂಡು ಸಂಗೀತಾ ಶೃಂಗೇರಿ ಅವರ ಮನೆಗೆ ಆಗಮಿಸಿದ್ದಾರೆ.

ಸಂಗೀತಾ ಮನೆಗೆ ಭೇಟಿ ಕೊಟ್ಟ ವೇಳೆ, ಡ್ರೋನ್ ಪ್ರತಾಪ್ ಅವರಿಗಾಗಿಯೇ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಡ್ರೋನ್ ಪ್ರತಾಪ್ ಪ್ರೀತಿಯ ಅಕ್ಕ ಸಂಗೀತಾಗೆ ತಿಳಿ ಹಸಿರು ಬಣ್ಣದ ಚೂಡಿದಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ವೇಳೆ, ಪ್ರತಾಪ್‌ಗೆ ನಟಿ ರಾಕಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ಸಂದರ್ಭದ ವಿಡಿಯೋ ಶೇರ್‌ ಮಾಡಿ ಪ್ರೀತಿಯ ಅಕ್ಕ ಜೊತೆಗಿರುವೆ ಸದಾ ಅಂತಾ ಪ್ರತಾಪ್ ಬರೆದುಕೊಂಡಿದ್ದಾರೆ. ಅದಷ್ಟೇ ಅಲ್ಲ, ರಕ್ಷಕ್‌ ಕೂಡ ಸಂಗೀತಾರನ್ನು ಭೇಟಿಯಾಗಿದ್ದಾರೆ.  ಇದನ್ನೂ ಓದಿ:‘ಶಿವಶರಣ ಮೋಳಿಗೆ ಮಾರಯ್ಯ’ ಚಿತ್ರಕ್ಕೆ ಚಾಲನೆ ನೀಡಿದ ಗವಿಶ್ರೀ

ಅಂದಹಾಗೆ, ಸಂಗೀತಾ ದೊಡ್ಮನೆಯಿಂದ ಬಂದ್ಮೇಲೆ ‘ಮಾರಿಗೋಲ್ಡ್’ ಎಂಬ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಹೊಸ ಬಗೆಯ ಕಥೆಗಳನ್ನು ನಟಿ ಕೇಳ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಲಿದೆ.

Share This Article