ರೂಪೇಶ್ ಶೆಟ್ಟಿ ‘ಸರ್ಕಸ್’ಗೆ ಬಿಗ್ ಬಾಸ್ ಟೀಮ್ ಸಾಥ್

Public TV
1 Min Read

ಬಿಗ್ ಬಾಸ್ (Bigg Boss) ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಅವರು ದೊಡ್ಮನೆ ಆಟದಲ್ಲಿ ಗೆದ್ದ ಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗೊದ್ದಾರೆ. ಸದ್ಯ ತುಳು ‘ಸರ್ಕಸ್’ ಸಿನಿಮಾ ಮೂಲಕ ರೂಪೇಶ್ ಶೆಟ್ಟಿ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿದೆ. ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ಶೆಟ್ರ ಸರ್ಕಸ್‌ಗೆ ಬಿಗ್ ಬಾಸ್ ಮನೆ ಮಂದಿ ಕೂಡ ಸಾಥ್ ನೀಡಿದ್ದಾರೆ.

‘ಗಿರಿಗಿಟ್’ (Girgit) ಸಿನಿಮಾ ಕೋಸ್ಟಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಗಲ್ಲಾಪೆಟ್ಟೆಗೆಯಲ್ಲಿ ಹಿಸ್ಟರಿ ಕ್ರಿಯೆಟ್ ಮಾಡಿದ ಬೆನ್ನಲ್ಲೇ ದೊಡ್ಮನೆಗೆ ರೂಪೇಶ್ ಶೆಟ್ಟಿ ಕಾಲಿಟಿದ್ದರು. ಬಿಗ್ ಬಾಸ್‌ನಲ್ಲೂ ತಮ್ಮ ನಡೆ, ನುಡಿ, ವ್ಯಕ್ತಿತ್ವದಿಂದ ರೂಪೇಶ್ ಶೆಟ್ಟಿ ಮನೆಮಾತಾದರು. ಬಿಗ್ ಬಾಸ್ ಮನೆಯ ಗೆಲುವಿನ ಪಟ್ಟ ಕೂಡ ತಮ್ಮ ಮುಡಿಗೇರಿಸಿಕೊಂಡರು. ಇದನ್ನೂ ಓದಿ:‘ಪೊಗರು’ ಚಿತ್ರದಲ್ಲಿ ಧ್ರುವ ಜೊತೆ ನಟಿಸಿದ್ದ ಬಾಡಿ ಬಿಲ್ಡರ್ ಜೋ ಲಿಂಡ್ನರ್

ರೂಪೇಶ್ ಶೆಟ್ಟಿ, ನಟಿಸಿ, ನಿರ್ದೇಶಿಸಿರುವ ‘ಸರ್ಕಸ್’ ಸಿನಿಮಾ ಇತ್ತೀಚಿಗಷ್ಟೇ ತೆರೆಕಂಡಿತು. ದಕ್ಷಿಣ ಕನ್ನಡದಲ್ಲಿ ಈ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಚಿತ್ರ ಸೂಪರ್ ಹಿಟ್ ಆಗಿದೆ. ಇದೇ ಖುಷಿಯಲ್ಲಿ ತಂಡ ‘ಸರ್ಕಸ್’ ಸಿನಿಮಾ ಸೆಲೆಬ್ರಿಟಿ ಶೋವನ್ನ ಬೆಂಗಳೂರಿನ ಖಾಸಗಿ ಮಾಲ್‌ವೊಂದರಲ್ಲಿ ಪ್ರದರ್ಶಿಸಲಾಗಿತ್ತು. ಈ ವೇಳೆ ರೂಪೇಶ್ ಶೆಟ್ಟಿ ಸಿನಿಮಾಗೆ ಬಿಗ್ ಬಾಸ್ ಮನೆ ಮಂದಿ ರಾಕೇಶ್ ಅಡಿಗ(Rakesh Adiga), ದಿವ್ಯಾ ಉರುಡುಗ, ಅರವಿಂದ್ ಕೆಪಿ (Aravind Kp), ಸಾನ್ಯ ಅಯ್ಯರ್ (Saanya Iyer), ನವಾಜ್, ಸಾನ್ಯ ತಾಯಿ ದೀಪಾ ಅಯ್ಯರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

‘ಸರ್ಕಸ್’ ತುಳು ಸಿನಿಮಾ ನೋಡಿ ಬಿಗ್ ಬಾಸ್ ಮನೆಮಂದಿ ಖುಷಿಪಟ್ಟಿದ್ದಾರೆ. ರೂಪೇಶ್ ಶೆಟ್ಟಿ ಅವರ ನಟನೆ & ನಿರ್ದೇಶನ ಎರಡನ್ನು ಮೆಚ್ಚಿಕೊಂಡಿದ್ದಾರೆ. ಶೆಟ್ರ ಪರಿಕಲ್ಪನೆಯ ಸಿನಿಮಾಗೆ ಬಿಗ್ ಬಾಸ್ ಮಂದಿ ಭೇಷ್ ಎಂದಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್