BBK 11: ನಾನು ಯಾವತ್ತಿದ್ದರೂ ಡಿಬಾಸ್‌ ಫ್ಯಾನ್:‌ ‘ಬಿಗ್‌ ಬಾಸ್‌’ ರಜತ್‌

Public TV
2 Min Read

‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) 2ನೇ ರನ್ನರ್ ಅಪ್ ರಜತ್ (Rajath) ಅವರು ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ನಾನು ಬಿಗ್ ಬಾಸ್‌ನಲ್ಲಿದ್ರೂ ಎಂದಿಗೂ ಡಿಬಾಸ್ (Darshan) ಅಭಿಮಾನಿ, ಅದನ್ನು ಹೇಳಿಕೊಳ್ಳೋಕೆ ಭಯವಿಲ್ಲ ಎಂದು ಮಾತನಾಡಿದ್ದಾರೆ.

ಸುದೀಪ್ ಸರ್ ಹೇಳಿದ ಹಾಗೆ ಇತಿಹಾಸದಲ್ಲೇ ಫಸ್ಟ್ ಟೈಮ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ಟಾಪ್ 3 ಆಗೋದು ದೊಡ್ಡ ವಿಚಾರ. ನಾನು ಕೂಡ ಗೆಲ್ತೀನಿ ಅಂತಲೇ ಬಂದೆ ಆದರೆ ಕರ್ನಾಟಕದಲ್ಲಿ ಗಾಂಧೀಜಿ ಬಂದು ನಿಂತರೂ ಹನುಮಂತನ ಮುಂದೆ ಗೆಲ್ಲೋಕೆ ಆಗಲ್ಲ. ಹಾಗಾಗಿ ಮತ್ತೆ ಏನು ಅಂತ ಹೊಡೆದಾಡೋಣ, ಹಾಗಾಗಿ ಗೆದ್ದಿಲ್ಲ ಅನ್ನೋ ಬೇಸರವಿಲ್ಲ ಎಂದಿದ್ದಾರೆ.

ಬಿಗ್ ಬಾಸ್ ಮನೆ ಮತ್ತು ಅವರ ವಾಯ್ಸ್ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆ ಮನೆ ತುಂಬಾ ಕಲಿಸಿಕೊಡ್ತು, ಸ್ವಾಭಿಮಾನ ಕಲಿಸಿಕೊಟ್ಟಿದೆ. ಈ ಹಿಂದೆ 3 ಸೀಸನ್‌ಗಳಿಂದ ಕಾಲ್ ಬಂದಿತ್ತು. ಆದರೆ ಆಗಿರಲಿಲ್ಲ. ನನ್ನ ವ್ಯಕ್ತಿತ್ವ ಹೇಗೆ ಇತ್ತೋ ನಾನು ಆ ಪ್ರಕಾರ ನಡೆದುಕೊಂಡಿದ್ದೇನೆ. ಅದು ಜನಕ್ಕೆ ಇಷ್ಟ ಆಗಿದೆ. ಅದರ ಬಗ್ಗೆ ಖುಷಿಯಿದೆ. ನಾನು ಗೆಲ್ತೀನಿ ಅಂತ ನಂಬಿಕೆಯಲ್ಲಿದ್ದೆ, ಬಾಟಮ್ 2 ಅಥವಾ 3ಗೆ ನಾನು ಬಂದಿರಲಿಲ್ಲ. ಹಾಗಾಗಿ ಗೆಲ್ಲುವ ವಿಶ್ವಾಸ ಇತ್ತು.

ವಿನಯ್ ಗೌಡ ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದರ ಬಗ್ಗೆ ರಜತ್ ಮಾತನಾಡಿ, ವಿನಯ್ ನನ್ನ ಆತ್ಮೀಯ ಗೆಳೆಯ ಅವರೊಂದಿಗೆ ಒಂದು ಶೋ ಮಾಡಿದ್ದೇನೆ. ನಾವಿಬ್ಬರೂ ಸೇರಿ ಮಾಡದೇ ಇರೋ ಕೆಲಸಗಳಿಲ್ಲ. ನಾವಿಬ್ಬರೂ ಅಣ್ಣ ತಮ್ಮ ಇದ್ದ ಹಾಗೆ. ಹಾಗಾಗಿ ಅವರನ್ನು ಹೋಲಿಸಿ ಮಾತನಾಡಿದ್ರೆ ಬೇಸರವಿಲ್ಲ.

ನಾನು ಯಾವತ್ ಇದ್ರೂ ಡಿಬಾಸ್ ಫ್ಯಾನ್, ಅದನ್ನು ಹೇಳಿಕೊಳ್ಳೋಕೆ ನನಗೆ ಭಯ ಇಲ್ಲ. ನನಗೆ ದರ್ಶನ್ ಅವರನ್ನು 3-4 ಬಾರಿ ಭೇಟಿಯಾಗಿದ್ದೇನೆ. ಅವರೊಂದಿಗೆ ಉತ್ತಮ ಒಡನಾಟವಿದೆ ಎಂದಿದ್ದಾರೆ. ಇದನ್ನೂ ಓದಿ:ನಾನು ‘ಬಿಗ್ ಬಾಸ್’ ಗೆದ್ದಿದ್ದು ನಮ್ಮ ಹುಡುಗಿಗೆ ಖುಷಿಯಿದೆ: ಹನುಮಂತ

ಇನ್ನೂ ಸುದೀಪ್ ಸರ್ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತಾರೆ ಎಂದಿದ್ದಾರೆ. ನನಗೂ ನೆಗೆಟಿವ್ ರೋಲ್ ನಟಿಸಬೇಕು ಎಂದು ಆಸೆಯಿದೆ ನೋಡೋಣ ಎಂದಿದ್ದಾರೆ.

ಈ ವೇಳೆ, ಮಾಜಿ ಗರ್ಲ್‌ಫ್ರೆಂಡ್‌ ಜೊತೆಗಿನ ಟ್ರೋಲ್ ಬಗ್ಗೆ ರಜತ್ ಮಾತನಾಡಿ, ಜನ ಯಾವತ್ತೂ ನಮ್ಮ ವೈಯಕ್ತಿಕ ಜೀವನದ ಸ್ಟೋರಿ ಇಟ್ಕೋಂಡು ನಮ್ಮನ್ನು ಜಡ್ಜ್ ಮಾಡಲ್ಲ. ಟ್ರೋಲ್ ಮಾಡುವವರು ಮಾಡುತ್ತಲೇ ಇರುತ್ತಾರೆ. ಆದರೆ ನಾನು ನನ್ನ ಪಾಡಿಗೆ ಬೆಳೆಯುತ್ತಲೇ ಇರುತ್ತೇನೆ ಎಂದು ರಜತ್ ತಿರುಗೇಟು ನೀಡಿದ್ದಾರೆ.

Share This Article