ಬೆದರಿಕೆ ಕರೆ ಮಾಡಿದ ಕಿಡಿಗೇಡಿಗಳಿಗೆ ಪ್ರಥಮ್ ಖಡಕ್ ವಾರ್ನಿಂಗ್

Public TV
1 Min Read

‘ಬಿಗ್ ಬಾಸ್’ ವಿನ್ನರ್ ಪ್ರಥಮ್‌ಗೆ (Pratham) ಇತ್ತೀಚೆಗೆ ದರ್ಶನ್ ಫ್ಯಾನ್ಸ್‌ಗಳಿಂದ (Darshan Fans) ಬೆದರಿಕೆ ಕರೆ ಬಂದ ಬೆನ್ನಲ್ಲೇ ನಟ ಠಾಣೆ ಮೆಟ್ಟಿಲೇರಿದ್ದರು. ಈಗ ಈ ಪ್ರಕರಣದ ವಿಚಾರವಾಗಿ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಇನ್ಮೇಲೆ ಲೀಗಲ್ ಆಗಿ ಹೋಗ್ತೀನಿ ಎಂದು ನಟ ವಾರ್ನಿಂಗ್ ಕೊಟ್ಟಿದ್ದಾರೆ.

ಇತ್ತೀಚೆಗೆ ನಟ ಪ್ರಥಮ್‌ಗೆ ಮತ್ತೆ ಬೆದರಿಕೆ ಬೆನ್ನಲ್ಲೇ ಕಿಡಿಗೇಡಿಗಳಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದರು. ಬಳಿಕ ಸ್ಟೇಷನ್‌ಗೆ ಬಂದವರು ಪ್ರಥಮ್ ಫ್ಯಾನ್ಸ್ ಅಂತಾ ಹೈಡ್ರಾಮಾ ಮಾಡಿದ್ದಾರೆ. ಇದನ್ನೂ ಓದಿ:ರಾಮ್ ಪೋತಿನೇನಿ ನಟನೆಯ ‘ಡಬಲ್ ಇಸ್ಮಾರ್ಟ್’ ಚಿತ್ರದ ಸಾಂಗ್ ರಿಲೀಸ್

ಈ ಘಟನೆಗೆ ಪ್ರಥಮ್ ಪ್ರತಿಕ್ರಿಯಿಸಿ, ಅಂಧಾಭಿಮಾನಿಗಳೇ, ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ. ಮನೆಗೆ ಪೊಲೀಸ್ ನೋಟಿಸ್ ಬಂದ ಮೇಲೆ ಸ್ಟೇಷನ್‌ಗೆ ಬಂದು ನಾವು ಪ್ರಥಮ್ ಫ್ಯಾನ್, ಯಾರೋ ಫೇಕ್ ಪ್ರೊಫೈಲ್ ಮಾಡಿ ಬಿಟ್ಟಿದ್ದಾರೆ ಅಂತಾ ಕಾಲಿಗೆ ಬೀಳ್ತೀರಾ. ಸೋಶಿಯಲ್ ಮೀಡಿಯಾದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ? ನೀವು ಬುದ್ದಿ ಕಲಿಯಲ್ಲ. ಇನ್ಮೇಲೆ ಲೀಗಲ್ ಆಗಿ ಹೋಗ್ತೀನಿ ಎಂದು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಜೂನ್ 19ರಂದು ದರ್ಶನ್ ಅಭಿಮಾನಿಗಳಿಂದ ಬೆದರಿಕೆ ಕರೆ ಬಂದ ಬೆನ್ನಲ್ಲೇ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದರು.

Share This Article