Bigg Boss Ott 2: ದೊಡ್ಮನೆಗೆ ನವಾಜುದ್ದೀನ್‌ ಪತ್ನಿ ಆಲಿಯಾ ಸೇರಿದಂತೆ ಹಲವರ ಎಂಟ್ರಿ

Public TV
1 Min Read

ಲ್ಮಾನ್ ಖಾನ್ (Salman Khan) ನಿರೂಪಣೆಯಲ್ಲಿ ಬಿಗ್ ಬಾಸ್ ಓಟಿಟಿ 2 (Bigg Boss Ott 2) ಶುರುವಾಗಿದೆ. ಜೂನ್ 17ರಿಂದ ಓಟಿಟಿಯಲ್ಲಿ ಸ್ಟ್ರಿಮಿಂಗ್ ಆಗುತ್ತಿದೆ. ಯಾರೆಲ್ಲಾ ಸ್ಪರ್ಧಿಗಳಿದ್ದಾರೆ, ಈ ಸೀಸನ್‌ಗೆ ಯಾರು ಎಂಟ್ರಿ ಕೊಡ್ತಾರೆ ಎಂಬ ಕುತೂಹಲಕ್ಕೆ ಈಗಾಗಲೇ ಬ್ರೇಕ್ ಬಿದ್ದಿದೆ.

ಕಳೆದ ಓಟಿಟಿ ಕರಣ್ ಜೋಹರ್ (Karan Johar) ನಿರೂಪಣೆಯಲ್ಲಿ ಮೂಡಿ ಬಂದಿತ್ತು. ಆದರೆ ಹೊಸ ಸೀಸನ್‌ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ನಿರೂಪಣೆಯ ಜವಾಬ್ದಾರಿಯನ್ನು ಬ್ಯಾಡ್ ಭಾಯ್ ಸಲ್ಮಾನ್ ಖಾನ್ ನಿರ್ವಹಿಸುತ್ತಿದ್ದಾರೆ. ದೊಡ್ಮನೆ ಓಟಿಟಿ ಅಡ್ಡಾಗೆ 12 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ.

ಪೂಜಾ ಭಟ್ (Pooja Bhatt), ಅಭಿಷೇಕ್, ಪುನೀತ್ ಕುಮಾರ್, ಪಲಕ್, ಅವಿನಾಶ್ ಸಚ್‌ದೇವ್, ಮನೀಷಾ ರಾಣಿ, ಜಿಯಾ ಶಂಕರ್, ಜಾದ್, ಫಲಾಕ್ಯೂ, ಸೈರಸ್ ಬ್ರೋಚಾ, ಬೇಬಿಕಾ, ಆಕಾಂಕ್ಷಾ ಪುರಿ, ನಟ ನವಾಜುದ್ದೀನ್ ಪತ್ನಿ ಆಲಿಯಾ ಸಿದ್ಧಿಕಿ (Aaliya Siddiqui) ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಸುದೀಪ್ ಬಗ್ಗೆ ಬೇಸರ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ

ಆಟದ ಹೊಸ ಆಯಾಮ ಪ್ರೇಕ್ಷಕರನ್ನ ಸೆಳೆಯುತ್ತಿದೆ. ಕ್ರಿಕೆಟಿಗ ಅಜಯ್ ಜಡೇಜಾ, ನಟಿ ಸನ್ನಿ ಲಿಯೋನ್ ಕೂಡ ಶೋನಲ್ಲಿ ಭಾಗಿಯಾಗಿದ್ರು. ಹೀಗಿರುವಾಗ ಶಾಕಿಂಗ್ ಎಲಿಮಿನೇಷನ್ ಕೂಡ ನಡೆದಿದೆ. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಓಟಿಟಿ ಸೀಸನ್ 2 ಶುರುವಾಗಿ ಕೇವಲ 12 ಗಂಟೆ ಒಳಗೆ ಒಬ್ಬರು ಸ್ಪರ್ಧಿಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಈ ಸೀಸನ್‌ನ ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿದ್ದ ಪುನೀತ್ ಕುಮಾರ್, ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೊದಲ ಸ್ಪರ್ಧಿಯಾಗಿದ್ದಾರೆ. ಪುನೀತ್ ನಡವಳಿಕೆ ಇಷ್ಟವಾಗದೇ ಇರುವ ಕಾರಣದಿಂದಾಗಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ.

Share This Article