ಗೋವಾದಲ್ಲಿ ನಿವೇದಿತಾ ವೆಕೇಷನ್- ಫೋಟೋ ಹಂಚಿಕೊಂಡ ನಟಿ

Public TV
1 Min Read

ಬಿಗ್ ಬಾಸ್ (Bigg Boss Kannada) ಬ್ಯೂಟಿ ನಿವೇದಿತಾ ಗೌಡ(Niveditha Gowda)  ಅವರು ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಗೋವಾದಲ್ಲಿ ನಟಿ ಮಸ್ತ್ ಮಜಾ ಮಾಡ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ 2’ ರಿಯಾಲಿಟಿ ಶೋ ಮುಗಿದ ಮೇಲೆ ಪ್ರವಾಸದತ್ತ ನಟಿ ಬ್ಯುಸಿಯಿದ್ದಾರೆ.

ಕಿರುತೆರೆಯ ಬೋಲ್ಡ್ & ಬ್ಯೂಟಿಫುಲ್ ನಟಿ ನಿವೇದಿತಾ ಗೌಡ ಅವರು ಕೆರಿಯರ್ ವಿಚಾರದಲ್ಲಿ ಸುದ್ದಿಯಾಗೋದಕ್ಕಿಂತ ಪ್ರವಾಸ, ಪತಿಯ ಜೊತೆಗಿನ ರೀಲ್ಸ್, ಟ್ರೋಲ್‌ಗಳ ವಿಚಾರವಾಗಿಯೇ ಸೌಂಡ್ ಮಾಡುತ್ತಾರೆ. ಈಗ ಗೋವಾದಲ್ಲಿ (Goa) ನಿವೇದಿತಾ ಗೌಡ ವೆಕೇಷನ್ ಮಾಡ್ತಿದ್ದಾರೆ. ಗೋವಾದ ಸುಂದರ ತಾಣಗಳಿಗೆ ಚಂದನ್ ಪತ್ನಿ ಭೇಟಿ ನೀಡ್ತಿದ್ದಾರೆ. ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

ಇದೀಗ ಗೋವಾದ ವೆಕೇಷನ್‌ನ ಹೊಸ ಫೋಟೋವೊಂದನ್ನ ನಟಿ ಪೋಸ್ಟ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಮಿಂಚ್ತಿದ್ದಾರೆ. ನಿವಿ ನಯಾ ಫೋಟೋ ನೋಡ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಎಷ್ಟು ಅಂತಾ ಟ್ರಾವೆಲ್ ಮಾಡ್ತೀರಾ? ನಿಮ್ಮ ಪತಿಯ ಹಣವನ್ನೇಲ್ಲಾ ಖಾಲಿ ಮಾಡ್ತೀರಾ ಅಂತಾ ನಟಿಯ ಕಾಲೆಳೆದಿದ್ದಾರೆ. ಅದಕ್ಕೆ, ನಿವಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಚಂದನ್ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಇದೀಗ ನಟನಾ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ (Sandalwood) ನಟಿಯಾಗಿ ಮಿಂಚಲು ನಿವೇದಿತಾ ತಾಲೀಮು ನಡೆಸುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್