ಕಿಶನ್ ಜೊತೆ ಸೊಂಟ ಬಳುಕಿಸಿದ ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದ ನೆಟ್ಟಿಗರು

Public TV
1 Min Read

ಕಿರಿಕ್ ಬ್ಯೂಟಿ ಸಂಯುಕ್ತಾ ಹೆಗ್ಡೆ (Samyuktha Hegde) ಜೊತೆ ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಕಿಶನ್ ಬಿಳಗಲಿ (Kishen Bilagali) ಡ್ಯಾನ್ಸ್ ಮಾಡಿರೋದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಆಗಿದೆ. ರೊಮ್ಯಾಂಟಿಕ್ ಹಾಡಿಗೆ ಇಬ್ಬರು ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ಕಿರಿಕ್ ಬೆಡಗಿ ಸಂಯುಕ್ತಾ ಹೆಗ್ಡೆ ಈಗ ಕಿಶನ್ ಬಿಳಗಲಿ ಜೊತೆ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಜಂಗ್ಲಿ (Junglee) ಸಿನಿಮಾದ ನೀನೆಂದರೆ ನನ್ನೊಳಗೆ ಎಂಬ ಹಾಡಿಗೆ ಕಿಶನ್ ಜೊತೆ ನಟಿ ಸೊಂಟ ಬಳುಕಿಸಿದ್ದಾರೆ. ಇಬ್ಬರು ಬಿಳಿ ಬಣ್ಣದ ಉಡುಗೆಯಲ್ಲಿ ಹೈಲೆಟ್‌ ಆಗಿದ್ದಾರೆ.

ಈ ರೊಮ್ಯಾಂಟಿಕ್ ವಿಡಿಯೋ ನೋಡಿ, ಸರಿಯಾಗಿ ಬಟ್ಟೆ ಹಾಕಮ್ಮ ಇದೆಲ್ಲಾ ನಿನಗೆ ಬೇಕಾ? ಎಂದು ನಟಿಗೆ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:Animal: ರಣ್‌ಬೀರ್ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ರಶ್ಮಿಕಾ

ರಿಯಾಲಿಟಿ ಶೋಗಳಲ್ಲಿನ ಡ್ಯಾನ್ಸ್ ಮೂಲಕ ಮೋಡಿ ಮಾಡಿರುವ ಕಿಶನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಡ್ಯಾನ್ಸ್, ಫೋಟೋಶೂಟ್, ದಿನಚರಿಯ ಬಗ್ಗೆ ಅಪ್‌ಡೇಟ್ ನೀಡುತ್ತಾ ಸಕ್ರಿಯರಾಗಿದ್ದಾರೆ. ಸಂಯುಕ್ತಾ ಜೊತೆಗಿನ ಕಿಶನ್ ಡ್ಯಾನ್ಸ್ ಮೆಚ್ಚುಗೆಯ ಜೊತೆ ನೆಗೆಟಿವ್ ಕಾಮೆಂಟ್ಸ್‌ ಕೂಡ ಹರಿದು ಬರುತ್ತಿವೆ.‌ ಇದನ್ನೂ ಓದಿ:‘ಅಗ್ನಿಸಾಕ್ಷಿ’ ನಟಿಯ ಬೋಲ್ಡ್ ಫೋಟೋಗೆ ಫೈರ್ ಇಂಜಿನ್ ಎಂದ ನೆಟ್ಟಿಗರು

‘ಕ್ರೀಮ್’ ಎಂಬ ಸಿನಿಮಾದ ಚಿತ್ರೀಕರಣವನ್ನ ಸಂಯುಕ್ತಾ ಮುಗಿಸಿಕೊಟ್ಟಿದ್ದಾರೆ. ಸದ್ಯದಲ್ಲೇ ಈ ಚಿತ್ರದ ರಿಲೀಸ್ ಅಪ್‌ಡೇಟ್ ಸಿಗಲಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್