ಬಿಗ್ ಬಾಸ್: ಈ ವಾರ ಕಿಚ್ಚನ ಪಂಚಾಯತಿ ಅನುಮಾನ

Public TV
1 Min Read

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಕಿಚ್ಚನ ಪಂಚಾಯತಿಗಾಗಿ (Kicchan Panchayat) ಅಷ್ಟೂ ಕಂಟೆಸ್ಟೆಂಟ್ ಗಳು ಕಾಯುವುದು ಸಾಮಾನ್ಯ. ಕೇವಲ ಕಂಟೆಸ್ಟೆಂಟ್ ಗಳು ಮಾತ್ರವಲ್ಲ, ಅಸಂಖ್ಯಾತ ಕಿಚ್ಚನ ಅಭಿಮಾನಿಗಳು ಕೂಡ ಈ ಪಂಚಾಯತಿಗಾಗಿ ಕಾಯುತ್ತಾರೆ. ಆದರೆ, ಈ ವಾರ ಕಿಚ್ಚನ ಪಂಚಾಯತಿ ಇರೋದು ಅನುಮಾನ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಕಿಚ್ಚನ (Sudeep) ಪಂಚಾಯತಿ ಇಲ್ಲದೇ ಎಲಿಮಿನೇಷನ್ ಸಾಧ್ಯವಾ? ಎಂದು ಹಲವರು ಕೇಳಬಹುದು. ಆದರೆ, ಅದಕ್ಕೊಂದು ಲಾಜಿಕ್ ಹುಡುಕಿಕೊಂಡು ಈ ವಾರ ಮುಗಿಸಲಾಗುತ್ತಿದೆ ಎನ್ನುವುದು ಸದ್ಯಕ್ಕಿರುವ ಮಾಹಿತಿ. ಈ ವಾರ ಕಿಚ್ಚನಿಗೆ ಏನಾಯಿತು? ಯಾಕೆ ಪಂಚಾಯತಿಗೆ ಬರುವುದಿಲ್ಲ ಎನ್ನುವುದಕ್ಕೂ ಕಾರಣವಿದೆ. ಇಂದಿನಿಂದ ಕಿಚ್ಚ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿದ್ದಾರೆ.

ಕಿಚ್ಚನ ನೇತೃತ್ವದಲ್ಲಿ ಕೆಸಿಸಿ ನಡೆಯುತ್ತಿದೆ. ಇಂದು ಅದರ ಉದ್ಘಾಟನೆ ಸಮಾರಂಭ. ಸಿಎಂ ಸಿದ್ಧರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ ಕಿಚ್ಚ ಇರಲೇಬೇಕು. ಜೊತೆಗೆ ಕಿಚ್ಚನ ಟೀಮ್ ಕೂಡ ಕ್ರಿಕೆಟ್ ಆಡುತ್ತಿದೆ. ಇಂದು ಮತ್ತು ನಾಳೆ ಕ್ರಿಕೆಟ್ ಇರುವುದರಿಂದ ಕಿಚ್ಚನ ಪಂಚಾಯತಿ ಅನುಮಾನ ಎಂದು ಹೇಳಲಾಗುತ್ತಿದೆ.

 

ಸದ್ಯ ಮಾಹಿತಿ ಇಷ್ಟಿದೆ. ನಿನ್ನೆಯೇ ಕಿಚ್ಚನ ಪಂಚಾಯತಿ ಮುಗಿದೆಯಾ? ಅಥವಾ ಇಲ್ಲವಾ ಎನ್ನುವುದಕ್ಕೆ ಯಾವುದಕ್ಕೂ ಇವತ್ತು ಸಂಜೆವರೆಗೂ ಕಾಯಬೇಕು.

Share This Article