ಎಲಿಮಿನೇಷನ್ ಹಾಟ್ ಸೀಟ್‌ನಲ್ಲಿ 9 ಮಂದಿ- ಯಾರ ಆಟಕ್ಕೆ ಅಂತ್ಯ?

Public TV
1 Min Read

ಬಿಗ್ ಬಾಸ್‌ ಮನೆ (Bigg Boss Kannada) ಇದೀಗ ರಣರಂಗವಾಗಿದೆ. 6 ವಾರ ಪೂರೈಸಿ 7ನೇ ವಾರಕ್ಕೆ ಕಾಲಿಟ್ಟಿರೋ ಬೆನ್ನಲ್ಲೇ ನಾಮಿನೇಷನ್ ಬಿಸಿ ತಟ್ಟಿದೆ. ಈ ಬಾರಿ 9 ಸ್ಪರ್ಧಿಗಳು ಎಲಿಮಿನೇಷನ್ ಹಾಟ್ ಸೀಟ್‌ನಲ್ಲಿದ್ದಾರೆ. ಡಬಲ್ ಎಲಿಮಿನೇಷನ್ ನಂತರ ಈ ವಾರಾಂತ್ಯ ಯಾರಿಗೆ ಗೇಟ್ ಪಾಸ್ ಸಿಗಲಿದೆ ಎಂಬುದೇ ಹೊಸ ಟ್ವಿಸ್ಟ್.

ದೊಡ್ಮನೆಯಲ್ಲಿ ಈಗ ಆಟದ ಬಿಸಿ ಹೆಚ್ಚಾಗಿದೆ. ಇಶಾನಿ ಮತ್ತು ಭಾಗ್ಯಶ್ರೀ ಎಲಿಮಿನೇಷನ್‌ನಿಂದ ಮನೆಮಂದಿಗೆ ಡಬಲ್ ಶಾಕ್ ಆಗಿದೆ. ಈ ಬೆನ್ನಲ್ಲೇ 7ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲೂ ಜಟಾಪಟಿ ನಡೆದಿದೆ. ಇದನ್ನೂ ಓದಿ:ನಟಿ ಸಂಗೀತಾ ಸವಾಲಿಗೆ ತಲೆ ಶೇವ್ ಮಾಡಿಕೊಂಡ ಕಾರ್ತಿಕ್

ಈ ವಾರ ನಮ್ರತಾ ಗೌಡ, ನೀತು, ಡ್ರೋನ್ ಪ್ರತಾಪ್, ಸಿರಿ, ವಿನಯ್, ಸಂಗೀತಾ ಶೃಂಗೇರಿ, ಸ್ನೇಹಿತ್, ತನಿಷಾ, ತುಕಾಲಿ ಸಂತೋಷ್ ಅವರು ನಾಮೀನೇಟ್ ಆಗಿದ್ದಾರೆ.

ಬಿಗ್ ಬಾಸ್ (Bigg Boss Kannada) ಆಟ ಪ್ರಾರಂಭವಾದ ದಿನದಿಂದ ಕಾರ್ತಿಕ್ ಸದಾ ನಾಮಿನೇಷನ್ ಹಾಟ್ ಸೀಟ್‌ನಲ್ಲಿ ಇರುತ್ತಿದ್ದರು. ಈ ಬಾರಿ ಮನೆಯ ಕ್ಯಾಪ್ಟನ್ ಆಗಿರೋದ್ರಿಂದ ನಾಮಿನೇಷನ್ ಕತ್ತಿಯಿಂದ ಮಿಸ್ ಆಗಿದ್ದಾರೆ. ಇದೀಗ ನಾಮಿನೇಟ್ ಆಗಿರೋ 9 ಸ್ಪರ್ಧಿಗಳಲ್ಲಿ ಯಾರಿಗೆ ಆಟ ಅಂತ್ಯವಾಗಲಿದೆ ಕಾದುನೋಡಬೇಕಿದೆ.

Share This Article