ತನಿಷಾ ಆಟಕ್ಕೆ ಸಂಗೀತಾ ಎದುರೇಟು- ‘ಬಿಗ್‌’ ಮನೆಯಲ್ಲಿ ಖಾರದ ಘಾಟು

Public TV
2 Min Read

ದೊಡ್ಮನೆಯಲ್ಲಿ ಮೊದಲು ಇದ್ದ ಸ್ನೇಹ, ಪ್ರೀತಿ ಈಗ ದ್ವೇಷಕ್ಕೆ ತಿರುಗಿದೆ. ತನಿಷಾ, ಕಾರ್ತಿಕ್ (Karthik Mahesh) ಜೊತೆಗಿನ ಸಂಗೀತಾ ಮುನಿಸು ಆಟದಲ್ಲೂ ಮುಂದುವರೆದಿದೆ. ಸವಾಲು ಎಸೆಯೋ ಟಾಸ್ಕ್‌ವೊಂದರಲ್ಲಿ ವರ್ತೂರುಗೆ ಮತ್ತು ತನಿಷಾ (Tanisha Kuppanda) ಹಸಿಮೆಣಸಿನಕಾಯಿ ತಿನ್ನಿಸಿ ಬೆವರಿಳಿಸಿದ್ದಾರೆ.

ದೊಡ್ಮನೆಯಲ್ಲಿ ವೈಯಕ್ತಿಕ ದ್ವೇಷಗಳು ಈಗ ಆಟದಲ್ಲೂ ಎದ್ದು ಕಾಣ್ತಿದೆ. ತನಿಷಾ (Tanisha) ಮತ್ತು ಕಾರ್ತಿಕ್‌ಗೆ ಕೈ ಕೊಟ್ಟು ಈಗ ಚಮಚ ನಮ್ರತಾ ಜೊತೆ ಸಂಗೀತಾ (Sangeetha Sringeri) ಸೇರಿಕೊಂಡಿದ್ದಾರೆ. ಕಿಚ್ಚನ ಬುದ್ಧಿ ಮಾತಿಗೂ ಮಣಿಯದ ಸಂಗೀತಾ ಕಾರ್ತಿಕ್‌ ಟೀಮ್‌ ಬಿಟ್ಟು ವಿನಯ್‌ ಜೊತೆ ಸೇರಿಕೊಂಡಿದ್ದಾರೆ. ಇದೆಲ್ಲದರ ನಡುವೆ ಹೊಸ ಟಾಸ್ಕ್‌ವೊಂದನ್ನ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡಿದ್ದಾರೆ. ಇದನ್ನೂ ಓದಿ:ಶೆಟ್ರು ಹುಡುಗಿಯ ಹಾಟ್ ಪೋಸ್‌ಗೆ ಬೋಲ್ಡ್ ಆದ ಪಡ್ಡೆಹುಡುಗರು

ಟಾಸ್ಕ್‌ಗಾಗಿ ಮತ್ತೆ 2 ತಂಡಗಳಾಗಿ ಬಿಗ್ ಬಾಸ್ ವಿಂಗಡಿಸಿದ್ದಾರೆ. ಟೀಮ್ ಗಜಕೇಸರಿ ಮತ್ತು ಟೀಮ್ ಸಂಪತ್ತಿಗೆ ಸವಾಲ್ ಎಂದು ತಂಡಗಳನ್ನ ಮಾಡಲಾಗಿದೆ. ಎದುರಾಳಿ ತಂಡಕ್ಕೆ ಟಾಸ್ಕ್ ನೀಡಿ ಸವಾಲು ಎಸೆಯಬೇಕು. ಅದನ್ನ ಪೂರ್ಣ ಮಾಡದಿದ್ದರೆ ಎದುರಿರುವ ತಂಡಕ್ಕೆ ವಿಶೇಷ ಅಧಿಕಾರ ಸಿಗಲಿದೆ. ಈ ಅನುಸಾರ, ಟಾಸ್ಕ್‌ವೊಂದರಲ್ಲಿ ಗೆದ್ದಿದ್ದಕ್ಕೆ ಎದುರಾಳಿ ಟೀಮ್‌ಗೆ ಸಂಗೀತಾ ತಲೆ ಬೊಳಿಸಬೇಕು ಎಂದು ಹೇಳಿದ್ದರು.

ಅದರಂತೆ ತಂಡಕ್ಕಾಗಿ ತುಕಾಲಿ ಸಂತೂ ಮತ್ತು ಕಾರ್ತಿಕ್ ತಲೆ ಬೊಳಿಸಿದ್ದಾರೆ. ಇದೀಗ ಮತ್ತೆ 2ನೇ ಬಾರಿ ಕಾರ್ತಿಕ್‌ ತಂಡಕ್ಕೆ ಸವಾಲು ಎಸಗಿದೆ. ಇದರ ಅನುಸಾರ ಎದುರಾಳಿ ತಂಡದದ ತನಿಷಾ-ವರ್ತೂರು 20 ಹಸಿಮೆಣಸಿನಕಾಯಿ ತಿನ್ನಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನ ಪೂರ್ಣಗೊಳಿಸಿದರೆ ತನಿಷಾ ತಂಡಕ್ಕೆ ವಿಶೇಷ ಅಧಿಕಾರ ಸಿಗಲಿದೆ.

ಸಂಗೀತಾ ಸವಾಲನ್ನ ತನಿಷಾ-ವರ್ತೂರು ಕೊಂಚ ಸಿರಿಯಸ್ ಆಗಿಯೇ ತೆಗೆದುಕೊಂಡಿದ್ದರು. ಆಗಲ್ಲ ಅಂದರೆ ಬಿಡಿ ಪರ್ವಾಗಿಲ್ಲ ಎಂದು ತಂಡದವರು ಹೇಳಿದ್ರೂ ಕೂಡ ಕ್ಯಾರೆ ಎನ್ನದೇ ತನಿಷಾ ಮೆಣಸಿಕಾಯಿ ತಿಂದಿದ್ದಾರೆ. ಖಾರ ನೇತಿಗೆ ಏರಿದ್ರೂ ಆಟ ಬಿಟ್ಟು ಕೊಡದೇ ತನಿಷಾ ಸೈ ಎನಿಸಿಕೊಂಡಿದ್ದಾರೆ.

ಈ ಎಲ್ಲಾ ಹೊಸ ಟಾಸ್ಕ್‌ಗಳು ಬ್ರಹ್ಮಾಂಡ ಗುರೂಜಿ ನೇತೃತ್ವದಲ್ಲಿ ನಡೆದಿದೆ. ನಾಮಿನೇಷನ್ ಬಿಸಿ ನಡುವೆ ತಾ ಮುಂದೂ ನಾ ಮುಂದೂ ಎಂದು ಎಲ್ಲರೂ ಆಟ ಆಡಿದ್ದಾರೆ. ಅಂದಹಾಗೆ, ಈ ವಾರ ನಮ್ರತಾ, ವಿನಯ್, ತನಿಷಾ, ಸ್ನೇಹಿತ್, ಡ್ರೋನ್ ಪ್ರತಾಪ್, ನೀತೂ, ತುಕಾಲಿ ಸಂತೂ, ಸಿರಿ, ಸಂಗೀತಾ ಎಲಿಮಿನೇಷನ್ ಹಾಟ್ ಸೀಟ್‌ನಲ್ಲಿದ್ದಾರೆ.

Share This Article