ನಾನು ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಗಂಡನ ಥರ ಇರಬೇಕು- ಸೋನು

Public TV
2 Min Read

‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲಾ ಒಂದು ವಿಚಾರವಾಗಿ ಸೆನ್ಸೇಷನ್ ಕ್ರಿಯೆಟ್ ಮಾಡ್ತಿರುತ್ತಾರೆ. ಇದೀಗ ಮದುವೆ ಯಾವಾಗ? ಮದುವೆಯಾಗುವ (Wedding) ಹುಡುಗ ಹೇಗಿರಬೇಕು ಎಂದು ಕೇಳಿದ್ರೆ, ಕನ್ನಡದ ಶ್ಯಾನೆ ಟಾಪ್ ನಟಿ ಅದಿತಿ ಅವರ ಪತಿ ಯಶಸ್ ಕಡೆ ಬೆಟ್ಟು ತೋರಿಸಿದ್ದಾರೆ.

ಸಂದರ್ಶನದಲ್ಲಿ ಮದುವೆ ಬಗ್ಗೆ ಸೋನು ಮಾತನಾಡಿ, ಮೊದಲಿಗೆ ಮದುವೆ ಅನ್ನೋದು ನನ್ನ ತಲೆಯಲ್ಲಿ ಇಲ್ಲ. ಆದರೆ ನಮ್ಮ ಕನ್ನಡದ ನಟಿ ಅದಿತಿ ಪ್ರಭುದೇವ (Aditi Prabhudeva) ಅಂದರೆ ತುಂಬಾ ಇಷ್ಟ. ಹುಡುಗಿಯರಿಗೆ ಹುಡುಗಿಯರೇ ಕ್ರಶ್ ಆದರೆ ಯಾರು ಅಂತಾ ಕೇಳಿದ್ರೆ? ನಾನು ಅದಿತಿ ಮೇಡಂ ಎನ್ನುತ್ತೇನೆ. ಅವರು ಮಾತನಾಡುವ ರೀತಿ, ತೊಡುವ ಬಟ್ಟೆ ನನಗಿಷ್ಟ ಎಂದು ಸೋನು ಮಾತನಾಡಿದ್ದಾರೆ.

ಮದುವೆಯಾಗುವ ಹುಡುಗ ಅದಿತಿ ಪ್ರಭುದೇವ ಅವರ ಗಂಡನ ಥರ ಇರಬೇಕು. ಅದಿತಿ- ಯಶಸ್ ಬಾಂಧವ್ಯ ನೋಡಿದ್ರೆ ಖುಷಿಯಾಗುತ್ತದೆ. ಇಬ್ಬರ ಫೋಟೋ, ವಿಡಿಯೋ ನೋಡಿದಾಗ ನನಗೂ ಅದಿತಿ ಗಂಡನ ಥರ ಹುಡುಗ ಬೇಕು ಅನಿಸುತ್ತದೆ ಎಂದು ಮದುವೆಯಾಗುವ ಹುಡುಗನ ಬಗೆಗಿನ ಕನಸನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಪ್ಯಾಲೆಸ್ತೀನ್ ಪರ ಬ್ಯಾಟಿಂಗ್ ಮಾಡಿದಕ್ಕೆ ಮಿಯಾಗೆ ಕೆಲಸ ಹೋಯ್ತು

ಟೀಕೆ, ಟ್ರೋಲ್‌ಗಳ (Troll) ವಿಚಾರಕ್ಕೆ ಬಂದರೆ ನನಗೆ ರಶ್ಮಿಕಾ ಮಂದಣ್ಣ (Rashmika Mandanna) ನನಗೆ ಸ್ಪೂರ್ತಿ ಎಂದು ಸೋನು ಮಾತನಾಡಿದ್ದಾರೆ. ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ ಎಂದರೆ ತನಗಿಷ್ಟ ಎಂದು ಸಂದರ್ಶನದಲ್ಲಿ ಸೋನು ನೆಚ್ಚಿನ ಬಗ್ಗೆ ಹೇಳಿದ್ದಾರೆ. ಅವರಿಂದ ಕಲಿತಿರೋದು ತುಂಬಾನೇ ಇದೆ. ಯಾರೆಲ್ಲಾ ಅವರನ್ನ ಹೇಟ್ ಮಾಡುತ್ತಾರೆ ಅದು ನನಗೆ ಬೇಕಿಲ್ಲ. ರಶ್ಮಿಕಾ ನನ್ನ ಸ್ಪೂರ್ತಿ ಹೇಗೆಲ್ಲಾ ನೆಗೆಟಿವಿಯನ್ನ ದೂರ ಇಡಬೇಕು ಎಂದು ಅವರಿಂದ ಕಲಿತಿದ್ದೇನೆ.

ನೀನು ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ಯಾ ಅಂದರೆ ಮಾತು ಬೇಡ. ನಮ್ಮ ಸಾಧನೆಯಿಂದ ಉತ್ತರ ಕೊಡಬೇಕು. ನೀವೊಂದು ಸಿನಿಮಾ ಮಾಡುತ್ತಿದ್ದೀರಾ ಅಂದರೆ ಅಲ್ಲೇ ಟ್ರೋಲಿಗರಿಗೆ ಉತ್ತರ ಸಿಗುತ್ತದೆ. ಸೇಮ್ ನನಗೆ ರಶ್ಮಿಕಾ ಥರನೇ ಬೆಳೆಯಬೇಕು ಎಂದು ಆಸೆ ಇದೆ. ಅಮಿತಾಬ್ ಬಚ್ಚನ್ ಜೊತೆ ಎಲ್ಲ ಅವರು ಆಕ್ಟ್ ಮಾಡಿದ್ದಾರೆ. ಅದೆಲ್ಲಾ ಈಸಿ ಅಲ್ಲ. ಇನ್ನೂ ಹೇಳಬೇಕು ಅಂದರೆ ರಶ್ಮಿಕಾ ಅವರ ಬಿಂಬ ನಾನು ಎಂದು ಸೋನು ಮಾತನಾಡಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್