ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12 ಫಿನಾಲೆ ಹೊಸ್ತಿಲಲ್ಲಿದೆ. ಈ ನಡುವೆ ಮನೆಯಿಂದ ಒಬ್ಬರು ಮಿಡ್ ವೀಕ್ ಎಲಿಮಿನೇಟ್ (Mid Week Elimination) ಆಗ್ತಾರೆ. ಇಂದು ಬಿಗ್ ಬಾಸ್ ಮನೆಯಲ್ಲಿ ಯಾರ ಪ್ರಯಾಣ ಕೊನೆಯಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಧನುಷ್ ಈಗಾಗಲೇ ಫಿನಾಲೆ ತಲುಪಿದ್ದಾರೆ. ಅವರನ್ನು ಬಿಟ್ಟು ಉಳಿದವರು ಇಂದು (ಬುಧವಾರ) ಮಿಡ್ ವೀಕ್ ಎಲಿಮಿನೇಷನ್ ಸವಾಲು ಎದುರಿಸಬೇಕಿದೆ. ಇದರಲ್ಲಿ ಸೇಫ್ ಆಗುವವರು ಸೀಸನ್ 12ರ ಫಿನಾಲೆ ತಲುಪುತ್ತಾರೆ. ಈ ಸಂಬಂಧ ಕಲರ್ಸ್ ಕನ್ನಡ ಪ್ರೋಮೊ ರಿಲೀಸ್ ಮಾಡಿದೆ. ಇದನ್ನೂ ಓದಿ: ರಾಶಿಕಾ ಹೇಳೋ ಆ 5 ಫೈನಲಿಸ್ಟ್‌ಗಳ್ಯಾರು?
ಯಾರ ಪಯಣ ಇಲ್ಲಿಗೆ ಕೊನೆಯಾಗುತ್ತೆ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್ಫುಲ್ಕತೆ #colorfulstory #KicchaSudeep #ExpectTheUnexpected #CKPromo pic.twitter.com/6tyXn3LLdJ
— Colors Kannada (@ColorsKannada) January 14, 2026
ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಆ್ಯಕ್ಟಿವಿಡಿ ರೂಮ್‌ನಿಂದ ಒಬ್ಬೊಬ್ಬರನ್ನೇ ಹೊರಗೆ ಕಳುಹಿಸಲಾಗುತ್ತದೆ. ಹೊರಕಳುಹಿಸಲ್ಪಡುವ ಸದಸ್ಯರ ಪೈಕಿ ಮನೆಯ ಒಳಗಡೆ ಮರಳಿ ಬರುವವರು ಸೀಸನ್ 12ರ ಫಿನಾಲೆ ತಲುಪುತ್ತಾರೆ. ಮನೆಗೆ ಮರಳಿ ಬಾರದ ಒಬ್ಬ ಸದಸ್ಯ/ಸದಸ್ಯೆ ವಿದಾಯ ಹೇಳಿ ಹೊರ ನಡೆಯುತ್ತಾರೆ.
ಮಿಡ್ ವೀಕ್ ಎಲಿಮಿನೇಷನ್ ಸಾಲಿನಲ್ಲಿ ಗಿಲ್ಲಿ, ರಘು, ರಕ್ಷಿತಾ, ಅಶ್ವಿನಿ, ಕಾವ್ಯ, ಧ್ರುವಂತ್ ಇದ್ದಾರೆ. ಯಾರು ಮನೆಯಲ್ಲೇ ಉಳಿಯುತ್ತಾರೆ? ಯಾರು ಹೊರಹೋಗ್ತಾರೆ ಅನ್ನೋದು ಸದ್ಯದ ಕುತೂಹಲ. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಮತ್ತೆ ಮರಳಿದ ಮಲ್ಲಮ್ಮ – ಧ್ರುವಂತ್‌ಗೆ ಶಾಕ್

